This is the title of the web page
This is the title of the web page

ಆಟೋಗೆ ಬಸ್ ಡಿಕ್ಕಿ 6 ಮಹಿಳೆಯರು ದುರ್ಮರಣ

ಅಮರಾವತಿ: ಆಟೋ ರಿಕ್ಷಾಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ 6 ಮಹಿಳೆಯರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ತಲ್ಲರೇವು ಮಂಡಲದ ಸೀತಾರಾಮಪುರಂ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಆಟೋಗೆ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ನಜ್ಜುಗುಜ್ಜಾಗಿ 6 ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರು ಹಾಗೂ ಗಾಯಾಳುಗಳು ಯಾನಂನ ನೀಲಪಲ್ಲಿಯವರಾಗಿದ್ದು, ಸೀಗಡಿ ಘಟಕದ ಉದ್ಯೋಗಿಗಳಾಗಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಾಲ್ವರು ಗಾಯಾಳುಗಳನ್ನು ಕಾಕಿನಾಡ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.