This is the title of the web page
This is the title of the web page

BWF ರ್ಯಾಂಕಿಂಗ್: ಪ್ರಿಯಾಂಶು ನಂ.38

ಹೊಸದಿಲ್ಲಿ: ಮೊನ್ನೆಯಷ್ಟೇ `ಓರ್ಲೀನ್ಸ್ ಮಾಸ್ಟರ್ ಸೂಪರ್ 300’ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಪ್ರಿಯಾಂಶು ರಾಜಾವತ್ ನೂತನ ಬಿಡಬ್ಲ್ಯುಎಫ್ ರ್ಯಾಂಕಿಂಗ್‍ನಲ್ಲಿ ಜೀವನಶ್ರೇಷ್ಠ 38ನೇ ಸ್ಥಾನ ಅಲಂಕರಿಸಿದ್ದಾರೆ.

ಪ್ರಿಯಾಂಶು ಭಾರತದ ಸಿಂಗಲ್ಸ್ ಆಟಗಾರರಲ್ಲಿ 4ನೇ ಅತ್ಯುತ್ತಮ ರ್ಯಾಂಕಿಂಗ್ ಹೊಂದಿದಂತಾಗಿದೆ. ಒಟ್ಟು 30,786 ಅಂಕಗಳನ್ನು ಹೊಂದಿದ್ದಾರೆ.

ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ 24ನೇ ಸ್ಥಾನಕ್ಕೆ ಏರಿದರೆ, ಕೆ. ಶ್ರೀಕಾಂತ್ 2 ಸ್ಥಾನಗಳ ಕುಸಿತಕ್ಕೊಳಗಾಗಿದ್ದಾರೆ (23). 8ನೇ ರ್ಯಾಂಕಿಂಗ್ ಹೊಂದಿರುವ ಎಚ್.ಎಸ್. ಪ್ರಣಯ್ ಭಾರತದ ಅಗ್ರಮಾನ್ಯ ಶಟ್ಲರ್ ಆಗಿದ್ದಾರೆ.
ವನಿತಾ ಸಿಂಗಲ್ಸ್‍ನಲ್ಲಿ ಪಿ.ವಿ. ಸಿಂಧು 2 ಸ್ಥಾನ ಕುಸಿತ ಕಂಡು 11ಕ್ಕೆ ಬಂದರೆ, ಸೈನಾ 31ನೇ ಸ್ಥಾನಕ್ಕೆ ಏರಿದ್ದಾರೆ.