ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದಿದ್ದ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟಕ್ಕೆ ಸಂಬಂಧಪಟ್ಟ ಹಾಗೆ ಬಳ್ಳಾರಿಯಲ್ಲಿ ಓರ್ವ ವ್ಯಕ್ತಿಯನ್ನು ಎನ್ಐಎ ವಶಕ್ಕೆ ಪಡೆದಿದ್ದಾರೆ.
ಶಬೀರ್ ಎಂಬುವನನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಹೆಚ್ಚಿನ ವಿಚಾರಣೆಗಾಗಿ ಕರೆ ತರುತ್ತಿದ್ದಾರೆ.ಎನ್ ಐ ಎ ವಶಕ್ಕೆ ಪಡೆದಿರುವ ಆರೋಪಿ ಬಳ್ಳಾರಿ ಭೇಟಿ ನೀಡಿದ್ದ, ಶಂಕಿತ ವ್ಯಕ್ತಿಯನ್ನು ಬುಡಾ ಕಾಂಪ್ಲೆಕ್ಸ್ನಲ್ಲಿ ಭೇಟಿಯಾಗಿಮಾತುಕತೆ ನಡೆಸಿದ್ದ ಎಂದು
ಹೇಳಲಾಗಿದೆ.
ಅಧಿಕಾರಿಗಳು ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನವನ್ನು ಸಹ ಘೋಷಣೆ ಮಾಡಿದ್ದರು.ಆಂಧ್ರಪ್ರದೇಶದ ತಿರುಪತಿ ಮತ್ತು ಹೈದರಾಬಾದ್ನಲ್ಲಿಯು ಸಹ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಧಿಸಲು ಶ್ರಮ ವಹಿಸಿರುತ್ತಾರೆ ಎನ್ನಲಾಗಿದೆ.