ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನೇತೃತ್ವದಲ್ಲಿ ರಾಜ್ಯದ ಸೌಹಾರ್ದ ಪಟ್ಟಣ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರು, ಆಡಳಿತ ಮಂಡಲಿ ಸದಸ್ಯರುಗಳಿಗಾಗಿ ಎರಡು ದಿನಗಳ `ಆಡಳಿತ ಪರಿಣಿತಿ ಅಭಿವೃದ್ಧಿ ತರಬೇತಿ’ ಕಾರ್ಯಕ್ರಮವನ್ನು ದಿನಾಂಕ 01 ಹಾಗೂ 02ನೇ ಫೆಬ್ರವರಿ 2024ರಂದು ವಿಜಯಶ್ರೀ ಹೆರಿಟೇಜ್ ವಿಲೇಜ್, ಹೊಸಪೇಟೆ ಇಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕಿನ ಮಾನ್ಯ ಅಧ್ಯಕ್ಷರಾದ ಶ್ರೀ ಮನೋಹರ ಮಸ್ಕಿರವರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸೌಹಾರ್ದ ಪಟ್ಟಣ ಬ್ಯಾಂಕುಗಳು ಸ್ವಯಂ ನಿಯಂತ್ರಣ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಸಹಕಾರಿ ಬ್ಯಾ ಂಕ್ಗಳು ತಮ್ಮ ಅಭಿವೃದ್ಧಿಗಾಗಿ ಬಲವಾದ ನೀತಿ ರೂಪಿಸಬೇಕು ಎಂದು ಕ.ರಾ.ಸೌ.ಸಂ.ಸ.ಸ.ನಿ. ಅಧ್ಯಕ್ಷ ಜಿ ನಂಜನಗೌಡ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ನಂಜನಗೌಡ, ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಇವರು ವಹಿಸಿದ್ದರು. ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ನ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಯು ನವೀಕೃತ ಜ್ಞಾನವನ್ನು ಹೊಂದಿರಬೇಕು ಮತ್ತು ತಮ್ಮದೇ ಆದ ಸದೃಢ ಬ್ಯಾಂಕಿಂಗ್ ನೀತಿಯನ್ನು ಹೊಂದಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಸಂಯುಕ್ತ ಸಹಕಾರಿಯ ಮಾನ್ಯ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀ ಶರಣಗೌಡ ಜಿ ಪಾಟೀಲ ಇವರು ನಡೆಸಿಕೊಟ್ಟರು. ಶ್ರೀ ವಿಶ್ವನಾಥ ಚ ಹಿರೇಮಠ, ಮಾನ್ಯ ಅಧ್ಯಕ್ಷರು, ವಿಕಾಸ್ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿ.,ಹೊಸಪೇಟೆ, ಸಂಯುಕ್ತ ಸಹಕಾರಿಯ ಮಾನ್ಯ ನಿರ್ದೆಶಕರಾದ ರಘುರಾಮ ರೆಡ್ಡಿ ರವರು ಈ ಸಂದರ್ಭದಲ್ಲಿ ಮಾತನಾಡಿ ಬ್ಯಾಂಕುಗಳ ಬಲವಾದ ನೀತಿಯನ್ನು ಮತ್ತು ಬ್ಯಾಂಕುಗಳ ಸ್ವಯಂ ನಿಯಂತ್ರಣ ನೀತಿಯ ಅಗತ್ಯತೆ ತಿಳಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ 09 ಸೌಹಾರ್ದ ಸಹಕಾರಿ ಬ್ಯಾಂಕ್ಗಳಿಂದ ಒಟ್ಟು 21 ಪ್ರತಿನಿಧಿಗಳು ಭಾಗವಹಿಸಿದ್ದರು.
ಕಲಬುರಗಿ ಪ್ರಾಂತೀಯ ಕಛೇರಿಯ ವ್ಯವಸ್ಥಾಪಕ ಸೂರ್ಯಕಾಂತ ರ್ಯಾಕಲೆರವರು ಕಾರ್ಯಕ್ರಮದ ವಂದನಾರ್ಪಣೆಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ ಲಿಮಿಟೆಡ್ನ ಸಂಸ್ಥಾಪಕ ಅಧ್ಯಕ್ಷರಾದ ಮನೋಹರ್ ಮಸ್ಕಿ ಇವರು ಮತ್ತು ಶ್ರೀ. ಜೆ ಪಿ ಸಾವೋಕರ್, ಡಿಜಿಎಂ (ನಿವೃತ್ತ), ಕೆನರಾ ಬ್ಯಾಂಕ್ ಬೆಂಗಳೂರು, ಶ್ರೀ. ಬಿ ಜೆ ಕುಲಕರ್ಣಿ, ಕಾಪೆರ್Çರೇಟ್ ಟ್ರೈನರ್, ಬಳ್ಳಾರಿ, ಎಸ್ ಜಿ ಕುಲಕರ್ಣಿ, ಕಾರ್ಪೊರೇಟ್ ಟ್ರೈನರ್, ಬೆಂಗಳೂರು, ಶ್ರೀ. ಎನ್ ದರ್ಶನ್, ಎಸ್ಐಬಿಎಸ್ಟಿಸಿ ಅಧ್ಯಾಪಕರು ಬೆಂಗಳೂರು, ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.