This is the title of the web page
This is the title of the web page

ಹುಣಸನಹಳ್ಳಿ, ಕೈಲಾಂಚ, ಸುಗ್ಗನಹಳ್ಳಿ, ಜಯಪುರದಲ್ಲಿ ಇಕ್ಬಾಲ್ ಹುಸೇನ್ ಪರ ಪ್ರಚಾರ ಜೆಡಿಎಸ್ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ

ರಾಮನಗರ: ಕ್ಷೇತ್ರದ ಜನರ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಚುನಾವಣೆಯಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಕೈಲಾಂಚ ಹೋಬಳಿಯ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಳೆದ 25 ವರ್ಷಗಳಿಂದ ರಾಮನಗರದ ಜನರು ಮತ ಹಾಕಿದ್ದರಿಂದ ಪ್ರಧಾನಿ, ಸಂಸದ ಶಾಸಕರನ್ನು ಮಾಡಿದಿರಿ ಈಗ ಅವರ ನಾಲ್ಕನೆ ಕುಡಿಗೆ ನೀವು ಮತ ಹಾಕಬೇಕೆ ಒಂದು ಸಾರಿ ಆತ್ಮಾವಲೋಕನ ಮಾಡಿಕೊಳ್ಳಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದೀರಿ ಬಡವರಿಗೆ ನಿವೇಶನ, ಮಕ್ಕಳಿಗೆ ಉದ್ಯೋಗ, ಕಾರ್ಯಕರ್ತರಿಗೆ ಅಧಿಕಾರ ಕೊಡದವರು ಅವರ ಮಗನಿಗೆ ರಾಜಕೀಯ ಭವಿಷ್ಯ ನೀಡಬೇಕೆ ಎಂದು ಜನರು ಚರ್ಚೆ ಮಾಡಿ ಎಂದರು.

ಕರೋನಾ ಸಮಯದಲ್ಲಿ ಸೂಟಿಂಗ್ ತೆಗೆಯಲು ಹೈದರಬಾದ್ ಗೆ ಹೋಗಿದ್ದರು. ಕ್ಷೇತ್ರದ ಜನರು ಕರೋನಾ ಸಮಯದಲ್ಲಿ ನೆರವಾಗಲಿಲ್ಲ ಏಕೆ ಎಂದು ಜೆಡಿಎಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.ಕನಕಪುರದಲ್ಲಿ 21 ಸಾವಿರ ಮನೆಗಳನ್ನು ಕೊಟ್ಟಿದ್ದೀನಿ, 1 ಲಕ್ಷ ಕುಟುಂಬಗಳಿಗೆ ದನದಕೊಟ್ಟಿಗೆ, 3.500 ಚೆಕ್ ಡ್ಯಾಂಗಳ ನಿರ್ಮಾಣ, ಮಾಡಿಸಿದ್ದೇನೆ. ಶಾಶ್ವತವಾಗಿ ಅರ್ಕಾವತಿ ನದಿಯಲ್ಲಿ ನೀರು ಹರಿಸಿ ಕೈಲಾಂಚ ಭಾಗದ ರೈತರಿಗೆ ಅನುಕೂಲ ಮಾಡಿದ್ದೇನೆ. 5 ಲಕ್ಷ ರೂಪಾಯಿ ಅಚ್ಚಲುದೊಡ್ಡಿಯಲ್ಲಿ ಜಾಗ ಮಂಜೂರು, ಅಭಿವೃದ್ಧಿ ಮಾಡಿ ತೋರಿಸುತ್ತೇನೆ.

ಸಹೋದರಿಯರಿಗೆ ಅಣ್ಣನಾಗಿ ಯುವಕರಿಗೆ ಸಹೋದರನಾಗಿ ಕ್ಷೇತ್ರದ ಜನರೊಂದಿಗೆ ಇರುವ ಇಕ್ಬಾಲ್ ಹುಸೇನ್ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು. ಒಬ್ಬ ಕುಟುಂಬದ ಸದಸ್ಯನಂತೆ ಜನರೊಂದಿಗೆ ಇದ್ದಾರೆ ಅವರನ್ನು ನೀವು ಆಯ್ಕೆ ಮಾಡಿಕೊಳ್ಳಿ, ಕ್ಷೇತ್ರದಲ್ಲಿ ಬದಲಾವಣೆ ತನ್ನಿ ನಾನು ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ವಿನಮ್ರವಾಗಿ ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಮಾತನಾಡಿ ಕಳೆದ 5 ವರ್ಷದಿಂದ ನನ್ನನ್ನು ಮನೆ ಮಗನಂತೆ ಸಾಕಿದ್ದೀರಿ, ಈಗ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದು ನನಗೆ ಒಂದು ಅವಕಾಶ ಮಾಡಿಕೊಡಿ, ನಿಮ್ಮ ಋಣ ತೀರಿಸುತ್ತೇನೆ ಎಂದು ಭಾವುಕರಾದರು.

ವಿಧಾನ ಪರಿಷತ್ತು ಸದಸ್ಯ ಎಸ್.ರವಿ, ಸಿ.ಎಂ.ಲಿಂಗಪ್ಪ, ಮಾಜಿ ಶಾಸಕ ಕೆ.ರಾಜು, ಕೆಎಂಎಪ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಕೆಪಿಸಿಸಿ ಸದಸ್ಯ ಕೆ.ರಮೇಶ್, ತಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್, ಮುಖಂಡ ವಿಶ್ವನಾಥ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ವಿ.ಎಚ್‍ರಾಜು, ನಗರ ಬ್ಲಾಕ್‍ನ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮುಖಂಡರಾದ ಅರಳಪ್ಪ, ಅಪ್ಪಾಜಿ, ಉಮೇಶ್, ವಾಸುನಾಯ್ಕ, ರಾಮಣ್ಣ, ಸಿದ್ದೇಗೌಡ ಮತ್ತಿತರರು ಇದ್ದರು.