ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯ 26ನೇ ವಾರ್ಡ್ ಗಂಗಾಧರಪುರ ಮತ್ತು 27ನೇ ವಾರ್ಡ್ ರೋಜಿಪುರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಶುಕ್ರವಾರ ಮನೆ ಮನೆಗೆ ತೆರಳಿ ಮೈತ್ರಿ ಅಭ್ಯರ್ಥಿಯಾದ ಡಾ.ಕೆ ಸುಧಾಕರ್ ಪರವಾಗಿ ಮತಯಾಚಿಸಿದರು.
ಸದೃಢ ಹಾಗೂ ಸಮರ್ಥ ಆಡಳಿತಕ್ಕಾಗಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಗೆಲವು ನಿಶ್ಚಿತ ಎಂದರು.ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್. ರವಿಕುಮಾರ್, ಬಿಜೆಪಿ ಜಿಲ್ಲಾ ಮುಖಂಡ ಗೋಪಿ, ನಗರಸಭೆ ಮಾಜಿ ಅಧ್ಯಕ್ಷ ಮುದ್ದಪ್ಪ, ಮಾಜಿ ಸದಸ್ಯರಾದ ಆರ್.ಕೆಂಪರಾಜು, ಕೆ.ಎಚ್. ವೆಂಕಟರಾಜು, ಮುಖಂಡರಾದ ಮಹೇಶ್, ಮನು, – ಗುರು, ಹನುಮಂತರಾಜು ಪಾಲ್ಗೊಂಡಿದ್ದರು.