ತಿಪಟೂರು: ಕೊಬ್ಬರಿಗೆ ಉತ್ತಮ ಬೆಲೆ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು.
ನಗರದ ದೊಡ್ಡಯ್ಯನಪಾಳ್ಯ ಶ್ರೀ ಚೌಡೇಶ್ವರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಗೃಹದಲ್ಲಿ ಲೋಕಸಭಾ ಚುನಾವಣೆಯ ಅಂಗವಾಗಿ ಪ್ರಚಾರ ಸಭೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ತುಮಕೂರು ಕಲ್ಪತರು ನಾಡು ಎಂದು ಪ್ರಸಿದ್ದಿ ಪಡಿದಿದೆ, ಪ್ರಸ್ತುತ ಕೊಬ್ಬರಿ ಬೆಲೆ ಕಡಿಮೆಯಿದ್ದು ಎಲ್ಲರೂ ಬೆಂಬಲ ಬೆಲೆ ನಿರೀಕೆಯಲ್ಲಿದ್ದಾರೆ, ಈ ಕುರಿತು ಚುನಾಯಿತನಾದರೆ ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿ ಉತ್ತಮ ಬೆಂಬಲ ಬೆಲೆ ಸಿಗುವಂತೆ ನೋಡಿಕೊಳ್ಳುತ್ತೇನೆಂದರು.
ಜೊತೆಗೆ ತುಮಕೂರು ಕ್ಷೇತ್ರ ಬಹುದೊಡ್ಡ ಕ್ಷೇತ್ರ ಮುಂದೆ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಎಲ್ಲರೂ ಆಶಿರ್ವದಿಸಬೇಕೆಂದರು.
ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಮಾತನಾಡಿ, ಈಗಾಗಲೇ ಅನೇಕ ಅಭಿವೃದ್ಧಿ ಚಟುವಟಿಕೆಗಳು ನಡೆದಿದ್ದು ಇನ್ನೂ ನೆನೆಗುದಿಯಲ್ಲಿರುವ ಅನೇಕ ಚಟುವಟಿಕೆಗಳು ಪೂರ್ಣವಾಗಬೇಕಿದೆ, ಸೋಮಣ್ಣನವರು ಈ ಬಗ್ಗೆ ಚರ್ಚಿಸಿದ್ದು ಆ ಎಲ್ಲಾ ಕೆಲಸಗಳನ್ನು ಮಾಡಲು ತಾವೆಲ್ಲರೂ ಚುನಾವಣೆಯಲ್ಲಿ ಅನುಕೂಲವಾಗುವಂತಹ ವಾತಾವರಣವನ್ನು ಸೃಷ್ಠಿಸಬೇಕೆಂದು ತಿಳಿಸಿದರು.
ಶ್ರೀ ಚೌಡೇಶ್ವರಿ ಸಹಕಾರಿಯ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಮೋದಿಯವರ ಉತ್ತಮ ಆಡಳಿತ ಇಂದು ಪ್ರಪಂಚದಾಧ್ಯಂತ ಹೆಸರು ಮಾಡಿದೆ, ಜೊತೆಗೆ ದೇಶದಾದ್ಯಂತ ಬಿಜೆಪಿ ಪರ ಉತ್ತಮ ವಾತಾವರಣವಿರುವುದರಿಂದ ವಿ.ಸೋಮಣ್ನನವರ ಗೆಲುವು ಸುಲಭದ್ದಾಗಿದೆ ಅವರು ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಮತ್ತೊಮ್ಮೆ ಮೋದಿಯವರು ಅಧಿಕಾರವನ್ನು ಮಾಡಲಿದ್ದಾರೆಂದು ಭರವಸೆಯ ಮಾತುಗಳನ್ನಾಡಿದರು.
ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು, ಮಾಜಿ ಎಪಿಎಂಸಿ ನಿರ್ದೇಶಕ ಬೋರ್ವೆಲ್ ಮಧುಸೂಧನ್, ಮುಖಂಡರಾದ ನಿರಂಜನ್, ನಂದೀಶ್, ರಾಮಕೃಷ್ಣಯ್ಯ, ಸೋಮಶೇಖರ್, ಮಂಜುನಾಥ್, ಪರಮೇಶ್ವರಯ್ಯ ಸೇರಿದಂತೆ ನೂರಾರು ಬೆಂಬಲಿಗರು ಹಿತೈಶಿಗಳು ಭಾಗವಹಿಸಿದ್ದರು.