ಕನಕಪುರ: ವಿರೋಧ ಪಕ್ಷದವರು ಏನೇ ಆಸೆ, ಆಮಿಷ ಗಳನ್ನು ಒಡ್ಡಿದರೂ ಸ್ಥಳೀಯ ಕಾರ್ಯಕರ್ತರು ಹಾಗೂ ಪ್ರಬುದ್ಧ ಮತದಾರರು ಮರುಳಾಗುವುದಿಲ್ಲ ಎಂದು ಜೆಡಿಎಸ್ ಪಕ್ಷದ ಮರಳವಾಡಿ ಹೋಬಳಿಯ ಹಿರಿಯ ಮುಖಂಡ ಎಂ.ಹೆಚ್. ಬೋಜರಾಜ್ ತಿಳಿಸಿದರು.
ತಾಲ್ಲೂಕಿನ ದೊಡ್ಡ ಮರಳವಾಡಿ ಹೋಬಳಿಯ ಮಲ್ಲಿಗೆ ಮೆಟ್ಟಿಲು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರ ಪೊಳ್ಳು ಭರವಸೆಗಳು ಹಾಗೂ ನಕಲಿ ಗಿಫ್ಟ್ ಕೂಪನ್ ಗಳ ಮಹಿಮೆಯಿಂದಾಗಿ ಕೆಲವೊಂದು ಕಡೆ ಪಕ್ಷ ಕ್ಕೆ ಹಿನ್ನಡೆ ಉಂಟಾಗಿದ್ದು ಬಿಟ್ಟರೆ ಈಗ ಕಾಂಗ್ರೆಸಿಗರ ನಿಜ ಬಣ್ಣ ಬಯಲಾಗಿದೆ ಎಂದು ಆರೋಪಿಸಿದರು.
ಹಾರೋಹಳ್ಳಿ ತಾಲೂಕಿನ ಜನತೆ ನಮ್ಮ ತಾಲೂಕಿನ ಅಭಿವೃದ್ಧಿಯಾಗಬೇಕಾದರೆ ಕುಮಾರಣ್ಣನ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಮತದಾರು ಅರ್ಥ ಮಾಡಿಕೊಂಡಿ ದ್ದು ಕಳೆದವಾರ ನಡೆದ ಸಹಕಾರ ಸಂಘದ ಚುನಾವಣೆ ಇದಕ್ಕೆ ಸಾಕ್ಷಿಯಾಗಿದೆ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಒಡ್ಡಿದ ಆಸೆ ಆಮಿಷಗಳಿಗೆ ಮತದಾರರು ಮರುಳಾಗದೆ ಜೆಡಿಎಸ್ ಬೆಂಬಲಿತ 12 ಅಭ್ಯರ್ಥಿಗಳನ್ನು ಅತ್ಯಧಿಕ ಬಹುಮತಗಳಿಂದ ಗೆಲ್ಲಿಸಿದ್ದು ಎಲ್ಲಾ ಸದಸ್ಯರು ಸಹ ಒಮ್ಮತದಿಂದ ಸಂಘದ ಅಭಿವೃದ್ಧಿ ಗೆ ಶ್ರಮಿಸುವ ಮೂಲಕ ರೈತರ ಹಿತ ಕಾಪಾಡುವ ನಿಟ್ಟಿ ನಲ್ಲಿ ಕೆಲಸ ನಿರ್ವಹಿಸುವಂತೆ ಕಿವಿಮಾತು ಹೇಳಿದರು.
ಮಲ್ಲಿಗೆ ಮೆಟ್ಟಿಲು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೊಂದು ನಾಮಪತ್ರ ಗಳು ಮಾತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರನ್ನಾಗಿ ಶಿವಮಾದೇಗೌಡ ಮತ್ತು ಉಪಾಧ್ಯಕ್ಷರನ್ನಾಗಿ ಜಿ.ಎನ್ ಶ್ರೀಕಂಠಯ್ಶ ಉ|| ಗುಂಡಪ್ಪ ನಾಮಪತ್ರ ಸಲ್ಲಿಸಿದ್ದರು ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಹಕಾರ ಇಲಾಖೆಯ ಚುನಾವಣಾಧಿಕಾರಿ ಮಂಜುನಾಥ್ ಘೋಷಿಸಿದರು.
ಸಹಾಯಕ ಚುನಾವಣಾ ಅಧಿಕಾರಿಯಾಗಿ ಸಂಘದ ಸಿಇಓ ರಾಮಕೃಷ್ಣಪ್ಪ ಕರ್ತವ್ಯ ನಿರ್ವಹಿಸಿದರು, ಸಿಬ್ಬಂದಿಗಳಾದ ಎಂ ವಿ ವೆಂಕಟೇಶ್, ಜಿ ಬಿ ದೀಪಿಕಾ ಹಾಜರಿದ್ದರು. ನಿರ್ದೇಶಕರುಗಳಾದ ಗೌರಮ್ಮ ಸಿದ್ದರಾಜು, ಶಿವನಮ್ಮ, ಎಂ ಪಿ ಕುಮಾರ್, ಕೆಂಪೇಗೌಡ, ದಾಸೇಗೌಡ, ಆರ್ ಗೋವಿಂದ ರಾಜು , ಎಂ ನಾಗೇಶ್, ಗೌರಮ್ಮ ಚಿಕ್ಕ ದುರ್ಗೇಗೌಡ, ತೋಕಸಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವೇಗೌಡ, ಪಡುವಣಗೆರೆ ಸಿದ್ದರಾಜು, ಜೆಡಿಎಸ್ ಹೋಬಳಿ ಅಧ್ಯಕ್ಷ ತಮ್ಮಯಣ್ಣ, ಮುಖಂಡ ರಾದ ಮಣಿಯಂಬಾಳು ಉಮೇಶ್ ಸೇರಿದಂತೆ ಅನೇಕರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವಮಾದೇಗೌಡ ಮಾತನಾಡಿ ಕರ್ನಾಟಕ ರಾಜ್ಯ ಸಮೃದ್ಧವಾಗಿರಬೇಕಾದರೆ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೆಗೌಡ ಹಾಗೂ ಕುಮಾರಣ್ಣ ನೇತೃತ್ವದ ಜನಪರ ರೈತಪರ ಕಾಳಜಿಯುಳ್ಳ ಜೆಡಿಎಸ್ ಸರ್ಕಾರದಿಂದ ಮಾತ್ರ ಸಾಧ್ಯ, ಸರ್ಕಾರದಿಂದ ರೈತರಿಗೆ ದೊರೆಯುವ ಸವಲತ್ತುಗಳನ್ನು ಪ್ರಾಮಾಣಿಕ ವಾಗಿ ಅವರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಜಿ ಎನ್ ಶ್ರೀಕಂಠಯ್ಯ ಮಾತನಾಡಿದರು.