ಹಾವೇರಿ : ತಿರುಪತಿಯ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಹೋಗುತ್ತಿದ್ದ ಕಾರೊಂದು ಪಲ್ಟಿಯಾಗಿ ನಾಲ್ವರು ದುರ್ಮರಣ ಕ್ಕೀಡಾಗಿರುವ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಹಲಗೇರಿ ಬೈಪಾಸ್ ಬಳಿ ನಡೆದಿದೆ.
ಎರಡು ಕುಟುಂಬದ ನಾಲ್ಕು ಸದಸ್ಯರು ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಇಂದು ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ತಿರುಪತಿಗೆ ತೆರಳುತ್ತಿದ್ದ ನಗರದ ಸಮಗಂಡಿ ಮತ್ತು ಬಾರ್ಕಿ ಈ ಎರಡು ಕುಟುಂಬಗಳಲ್ಲಿ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುರೇಶ ವೀರಪ್ಪ ಜಾಡಿ, ಐಶ್ವರ್ಯ ಈರಪ್ಪ ಬಾರ್ಕಿ, ಚೇತನಾ ಪ್ರಭುರಾಜ ಸಮಗಂಡಿ, ಪವಿತ್ರಾ ಪ್ರಭುರಾಜ ಸಮಗಂಡಿ, ಮೃತ ದುರ್ದೈವಿಗಳಾಗಿದ್ದಾರೆ.ಗಾಯಗೊಂಡ ಚನ್ನವೀರಪ್ಪ ಜಾಡಿ. ಸಾವಿತ್ರಾ ಜಾಡಿ. ವಿಕಾಶ ಹೊನ್ನಪ್ಪ ಬಾರ್ಕಿ.
ಹೊನ್ನಪ್ಪ ನೀಲಪ್ಪ ಬಾರ್ಕಿ. ಪ್ರಭುರಾಜ ಈರಪ್ಪ. ಸಮಗಂಡಿ ಗೀತಾ. ಹೊನ್ನಪ್ಪ ಬಾರ್ಕಿ. ಇವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಈSಐ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.
ರಾಣೇಬೆನ್ನೂರು ಸಂಚಾರಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು ದೂರ ದಾಖಲಾಗಿದೆ.