ಮೊನಾಕೊ: ಪ್ಯಾರಿಸ್ ಒಲಿಂಪಿಕ್ ಕೂಟದ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡಲು ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ತೀರ್ಮಾನಿಸಿದೆ.2028ರ ಲಾಸ್ ಏಂಜಲಿಸ್ ಒಲಿಂಪಿಕ್ಕೂಟದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಎಲ್ಲರಿಗೂ ನಗದು ಪ್ರಶಸ್ತಿ ನೀಡುವುದಾಗಿಯೂ ಸಂಸ್ಥೆಯು ಬುಧವಾರ ಘೋಷಿಸಿದೆ. ‘ಈ ಮೂಲಕ ಒಲಿಂಪಿಕ್ ಕೂಟದಲ್ಲಿ ನಗದು ಪ್ರಶಸ್ತಿ ನೀಡಲಿರುವ ಮೊದಲ ಕ್ರೀಡಾ ಸಂಸ್ಥೆಯೆಂಬ ಹೆಗ್ಗಳಿಕೆಗೆಡಬ್ಲ್ಯು.ಎ ಪಾತ್ರವಾಗಲಿದೆ.
ಅಥ್ಲೀಟ್ಗಳಿಗೆ ನಗದು ಪ್ರಶಸ್ತಿ ನೀಡಿ ಗೌರಿಸುವುದು ಆ ಕ್ರೀಡೆಯ ಉನ್ನತ ಯಶಸ್ಸಿನ ಪ್ರತೀಕವಾಗಿದೆ’ ಎಂದು ಡಬ್ಲ್ಯುಎ ಪ್ರಕಟಣೆಯಲ್ಲಿ ತಿಳಿಸಿದೆ.ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಭಾರತದ ನೀರಜ್ ಚೋಪ್ರಾ ಅವರು ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಜಯಿಸಿದ್ದರು. ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಈ ಸಾಧನೆ ಮಾಡಿದ ಭಾರತದಮೊದಲ ಅಥ್ಲೀಟ್ ಆಗಿದ್ದರು.
ಅವರು ಪ್ಯಾರಿಸ್ನಲ್ಲಿಯೂ ಚಿನ್ನ ಜಯಿಸುವ ನೆಚ್ಚಿನಅಥ್ಲೀಟ್ ಆಗಿದ್ದಾರೆ. ‘ರಿಲೆ ತಂಡಗಳಿಗೂಇದೇ ಮೊತ್ತವನ್ನು ನೀಡಲಾಗುವುದು. ತಂಡದೊಳಗಿನ ಅಥ್ಲೀಟ್ಗಳನ್ನು ಅದನ್ನು ಹಂಚಿಕೊಳ್ಳುವರು’ ಎಂದು ತಿಳಿಸಲಾಗಿದೆ.