ನುಡಿತೋರಣ ಬಳಗವು ವಾಟ್ಸ್ಪ್ ಸಾಹಿತ್ಯ ಬಳಗವಾಗಿದೆ. ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸಲು ದೊಡ್ಡ ಸಂಸ್ಥೆಯಾಗಬೇಕಿಲ್ಲ ಎಂಬುದಕ್ಕೆ ಅದ್ಭುತವಾದ ನಿದರ್ಶನವಾಗಿದೆ.
ಈ ಗುಂಪು 150-170 ಜನ ಸದಸ್ಯರನ್ನು ಹೊಂದಿರುವ ಈ ಗುಂಪು ಸದಾ ಸಕ್ರಿಯವಾಗಿರುವ ಬಳಗವಾಗಿದೆ . ಎರಡು ವರ್ಷಗಳಲ್ಲಿ ಸರಿ ಸುಮಾರು 28-30 ಅಂಕಣಗಳನ್ನು ವಿವಿಧ ಸಾಹಿತ್ಯ ಪ್ರಕಾರದ ಚಟುವಟಿಕೆಗಳನ್ನು ನಡೆಸುತ್ತಿರುವ 2ನೇ ವಾರ್ಷಿಕೋತ್ಸವವು ಕುಣಿಗಲ್ಲಿನ ಬ್ರಾಹ್ಮಣ ಸಮುದಾಯ ಭವನದಲ್ಲಿ 19-05-2024ರಂದು ವಿಜೃಂಭಣೆಯಿಂದ ನಡೆಯಿತು.
ಪುಸ್ತಕ ಬಿಡುಗಡೆಯ ಕಾರ್ಯಕ್ರಮದಿಂದ ಆರಂಭವದ ಕಾರ್ಯಕ್ರಮ ದಾಸವಾಣಿ ನಂತರ ಕವಿಗೋಷ್ಠಿ ಭೋಜನದ ನಂತರದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ನುಡಿಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಕಾರ್ಯಕ್ರಮವು ಮುಂಜಾನೆ 10ರಿಂದ ಸಂಜೆ ಆರರವರೆಗೂ ನಡೆದಿದ್ದು ಬಹಳ ವಿಶೇಷವಾಗಿತ್ತು.
ಕುಣಿಗಲ್ನಲ್ಲಿ ಸದಸ್ಯರು ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಆಯೋಜಿಸಿದ್ದರು. ರಾಜ್ಯದ ಹಲವಾರುಕಡೆಗಳಿಂದ ಬಂದ ಸದಸ್ಯರು ಹೊರನಾಡಿನಲ್ಲಿರುವ ಕನ್ನಡ ಸದಸ್ಯರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡದ ನಾಡಗೀತೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಜ್ಯೋತಿ ಬೆಳಗುವುದರೊಂದಿಗೆ ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ಕಾರ್ಯಕ್ರಮ ಉದ್ಘಾಟನೆಯನ್ನು ಸಪ್ಮಾ ಬುಕ್ ಹೌಸ್ನ ಕನ್ನಡ ವಿಭಾಗದ ಮುಖ್ಯಸ್ಥರಾದ ಆರ್ ದೊಡ್ಡೇ ಗೌಡರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಾಸ್ತಾವಿಕ ನುಡಿಗಳನ್ನು ಶ್ರೀ ಕಿರಣ್ ಹಿರಿಸಾವೆಯವರು ಆಡಿದರು ಹಾಗೂ ಬಳಗದ ಗುರಿ ಮತ್ತು ಉದ್ದೇಸಗಳನ್ನು ಹೇಳಿದರು ನಂತರ ಎರಡು ಕನ್ನಡ ಕೃತಿಗಳ ಲೋಕಾರ್ಪಣೆಯಾಯಿತು. ಗುಂಪಿನ ಸದಸ್ಯರಾದ ಶ್ರೀಮತಿ ಮಾನಸ ಕೆಕೆ ಅವರ “ಚಿತ್ತದ ಸುತ್ತ” ಕಥಾ ಸಂಕಲನ ಮತ್ತು ಮತ್ತೊಬ್ಬರು ಹಿರಿಯ ಸದಸ್ಯರಾದ ಶ್ರೀಮತಿ ಶೈಲಾ ಜಯಕುಮಾರ್ ಅವರ “ವೃತಿ ಬದುಕಿನ ಹಿನ್ನೋಟ” ಕೃತಿಗಳು ಲೋಕಾರ್ಪಣೆಗೊಂಡವು.
ಪುಸ್ತಕಗಳನ್ನು ಮಂಡ್ಯದ ನಿವೃತ್ತ ಆಡಳಿತಾಧಿಕಾರಿ ಮತ್ತು ಸಾಹಿತಿ ಶ್ರೀ ತ. ನಾ ಶಿವಕುಮಾರ್ , ಗುಂಪಿನ ಹಿರಿಯ ಸದಸ್ಯೆ ಸಾಹಿತಿ ಅನಸೂಯಾ ಸಿದ್ಧರಾಮು ಹಾಗೂ ಕೆನರಾ ಬ್ಯಾಂಕ್ ನಿವೃತ್ತ ನಿರ್ದೇಶಕರಾದ ಶ್ರೀ ಎಂ. ವೆಂಕಟೇಶ ಶೇಷಾದ್ರಿಯವರು ನರೆವೇರಿಸಿದರು. ಬಿಡುಗಡೆಗೊಂಡ ಮಾನಸ ಅವರ ಪುಸ್ತಕದ ಕುರಿತು ಶ್ರೀ ದೇಸು ಆಲೂರ್ ಮಾತನಾಡಿದರು, ಹಾಗೂ ಶೈಲಾ ಜಯಕುಮಾರ್ ಅವರ ಪುಸ್ತಕದ ಕುರಿತು ಅವರ ವಿದ್ಯಾರ್ತಿ ಹಾಗೂ ಶಿವಮೊಗ್ಗದ “ದಿ ಹಿಂದು” ಪತ್ರಿಕೆಯ ಪತ್ರಕರ್ತ ಸತೀಶ್ ಜಿಟಿಯವರು ಮಾತನಾಡಿದರು.
ಉದ್ಥಾಟನೆ ಮಾಡಿದ ಆರ್ ದೊಡ್ಡೇಗೌಡರು ಬಳಗದ ಕಾರ್ಯವನ್ನು ಶ್ಲಾಘಿಸಿ ಮುಂದಿನ ಕಾರ್ಯಕ್ರಮಕ್ಕೆ ಪುಸ್ತಕ ತಾಂಬೂಲವನ್ನು ಕೊಡುವುದಾಗಿ ಹೇಳಿದರು. ಬಿಡುಗಡೆ ಮಾಡಿದ ಮತ್ತೊಬ್ಬ ಅತಿಥಿ ತನಾಶಿಯವರು ದಿನಕ್ಕೆ ಹತ್ತು ನಿಮಿಷ ಕನ್ನಡ ಪುಸ್ತಕವನ್ನು ಓದಿ ಅದರಿಂದ ನಮ್ಮ ಜ್ಞಾನವನ್ನು ಬೆಳೆಸಿಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ನಿರೂಪಣೆ ಹಾಗೂ ನಿರ್ವಹಣೆಯನ್ನು ಶ್ರೀಮತಿ ಜಯಶ್ರೀ ರಾಜುರವರು ಮಾಡಿದರು, ಶ್ರೀಮತಿ ನಳಿನಾ ಸುಬ್ರಹ್ಮಣ್ಯ ತಂಡದವರು ಪ್ರಾರ್ಥನೆಯ ಗೀತೆಯನ್ನು ಹಾಡಿದರು ಶ್ರೀಮತಿ ಪವಿತ್ರ ಮೃತ್ಯುಂಜಯ ಅವರು ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು. ನೋಡಿ ತೋರಣದ ಈ ಪುಸ್ತಕ ಕೂಡ ಬಿಡುಗಡೆ ಮಡಲಾಯಿತು.
ನಂತರ ಭಕ್ತಿ ಭಾವ ಸಂಗಮ ಎಂಬ ಅತ್ಯುತ್ತಮ ಗಾಯನ ಕಾರ್ಯಕ್ರಮವನ್ನು ಶ್ರೀಮತಿ ಸುಮಾ ಸೂರ್ಯಾ ತಂಡದವರು ನಡೆಸಿಕೊಟ್ಟರು. ಶ್ರೀಮತಿ ರತ್ನಬಡವನಹಳ್ಳಿ, ಡಾ. ರುಕ್ಮಿಣಿ ವ್ಯಾಸ್ರಾಜ್, ಶ್ರೀಮತಿ ವಿದ್ಯಾ ಎಟಿ, ಶ್ರೀಮತಿ ಸರಸ್ವತಿ ಟಿಎಸ್, ಶ್ರೀಮತಿ ನಳಿನಾ ಸುಬ್ರಹ್ಮಣ್ಯ ಮತ್ತು ಶ್ರೀಮತಿ ಮಧು ವಸ್ತ್ರದ್ ಕಾರ್ಯಕ್ರಮವನ್ನು ಸೊಗಸಾಗಿ ನಡೆಸಿ ಕೊಟ್ಟರು ಮೊದಲಿಗೆ ದಾಸರ ಕೀರ್ತನೆಗಳನ್ನು ಹಾಡಿದರು ನಂತರದಲ್ಲಿ ಭಾವಗೀತೆಗಳನ್ನು ಕೂಡ ಸುಶ್ರಾವ್ಯವಾಗಿ ಹಾಡಿದರು.
ಸಾಹಿತ್ಯ ಕಾರ್ಯಕ್ರಮ ಎಂದ ಮೇಲೆ ಕವಿಗೋಷ್ಠಿ ಇರದೇ ಇದ್ದರೆ ಹೇಗೆ 15 ಜನ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀಮತಿ ಮಾಧುರಿ ದೇಶಪಾಂಡೆ ಹಾಗೂ ಗುಂಪಿನ ಸಂಚಾಲಕಿ ಶ್ರೀಮತಿ ಜಯಂತಿ ಚಂದ್ರಶೇಖರ್ ಅವರು ವಹಿಸಿದ್ದರು, ಗುಂಪಿನ ಸಕ್ರಿಯ ಸದಸ್ಯರು ಕವಿ ಗೋಷ್ಠಿಯಲ್ಲಿ ತಮ್ಮ ಕವನಗಳನ್ನು ವಾಚಿಸಿದರು.
ಶ್ರೀರಾಮನ ಕರಿತು, ರಾಮ ಮಂದಿರದ ಕುರಿತು, ಅಯೋಧ್ಯೆಯ ಭೇಟಿಯ ಕುರಿತು, ಮಹಿಳೆಯ ಹಿರಿಮೆಯ ಕುರಿತು ತಾಯಿಯ ಮನಸಿನ ಕುರಿತು, ಮಳೆಗಾಗಿ ವರುಣನನ್ನು ಪ್ರಾರ್ಥಿಸುವ ಕುರಿತು, ಕನ್ನಡ ನಾಡು ನುಡಿಯ ಕುರಿತು, ನೆನಪಿನ ಸಂಭ್ರಮದ ಕುರಿತು, ಜೀವನವನ್ನು ಸ್ವೀಕರಿಸುವ ಬಗೆ, ಜೀವನದ ಸಾರ, ದುಡಿಮೆಯಿಂದ ಮುಕ್ತಿಯನ್ನು ಬೇಡದೆ ಕಾಯಕವನ್ನೇ ಕೈಲಾಸವೆನ್ನುವ ಕುರಿತು ಇಬ್ಬಗೆಯ ಮನಸಿನ ನಡುವೆ ವಿರೋಧಾಭಾಸಗಳ ನಡುವೆ ಹೇಗೆ ಬದುಕುವುದ ಬುಟಾಟಿಕೆಯನ್ನು ಬಿಟ್ಟು ಹೇಗೆ ಬದುಕುವುದು, ಊರ್ಮಿಳೆಯ ಕುರಿತು ಲಕ್ಷ್ಮಣ ಭಾವನೆಗಳ ಕುರಿತು 15 ಕವನಗಳು ಕವನಗಳು ವಾಚಿಸಲ್ಪಟ್ಟವು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಅಭಿಜ್ಞಾ ಪಿಎಂ ಗೌಡರವರು ನಡೆಸಿಕೊಟ್ಟರು.
ಭೋಜನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊರನಾಡ ಕನ್ನಡತಿ ಶ್ರೀಮತಿ ಮಧು ವಸ್ತ್ರದ್ ಅವರ ಪರಿಕಲ್ಪನೆ ಹಾಗೂ ನಿರ್ವಹಣೆಯಲ್ಲಿ ಕನ್ನಡ ನಾಡಿನ ವೀರ ಹಾಗೂ ಹೆಮ್ಮೆಯ ಮಹಿಳೆಯರ ಏಕಪಾತ್ರಭೀನಯ, ಸಂಸ್ಕೃತಿ ಹಗೂ ಸಾಹಿತ್ಯದ ಸ್ಕಿಟ್ ಮತ್ತು ಜಾನಪದ ಗೀತೆಯ ನೃತ್ಯ ಹೀಗೆ ವಿವಿಧ ಕಾರ್ಯಕ್ರಮಗಳು ಎಲ್ಲರನ್ನೂ ಆಕರ್ಷಿಸಿದವು.
ಮೊದಲಬಾರಿಗೆ ನುಡಿತೋರಣ ಬಳಗವು ಮೂವರು ಸಾಧಕರಿಗೆ “ನುಡಿ ಭೂಷಣ” ಪ್ರಶಸ್ತಿಯನ್ನು ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ನಡೆಸಿ ಕನ್ನಡದ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿರುವವರಿಗೆ ಪ್ರಶಸ್ತಿ ನೀಡಲಾಯಿತು. ದೂರದರ್ಶನದ ಚಂದನವಾಹಿನಿಯ ನಿವೃತ್ತ ತಂತ್ರಜ್ಣ, ಸಾಹಿತಿಗಳು ಮಾತಿನ ಮನೆಯ ಸಂಸ್ಥಾಪಕರು ಆದ ಶ್ರೀ ರಾ ಸು ವೆಂಕಟೇಶ್ , ನಿವೃತ್ತ ಕೆನರಾ ಬ್ಯಾಂಕ್ ನಿರ್ದೇಶಕರು, ಶ್ರೀ ಎಂ. ವೆಂಕಟೇಶ್ ಶೇಷಾದ್ರಿಯವರಿಗೆ ಹಾಗೂ ಡಾ. ಶಿವಕುಮಾರ್ ಟಿ ಆಯುರ್ವೇದ ವೈದ್ಯಾಧಿಕಾರಿಗಳು ಹಾಗೂ ಸಾಹಿತಿಗಳು ಇವರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ವಿಶೇಷ ಸನ್ಮಾನವನ್ನು ಶ್ರೀಮತಿ ಮಧು ವಸ್ತ್ರದ್ ಹಾಗೂ ಶ್ರೀಮತಿ ಸುಮಾ ಸೂರ್ಯ ಅವರಿಗೆ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ವಸುಮತಿ ಜೈನ್ ಹಾಗೂ ಸಾಕ್ಷಿ ತಿಕೋಟಿಕರ್ರವರು ನಡೆಸಿಕೊಟ್ಟರು. ಒಂದು ತಿಂಗಳ ಹಿಂದೆ ಏರ್ಪಡಿಸಿದ್ದ ಕಥೆ ಕವನ ಲೇಖನ ಸ್ಪರ್ಧೆಯ ವಿಜೇತರಿಗೂ ಕೂಡ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ನುಡಿತೋರಣದ ಸಂಸ್ಥಾಪಕಾರದ ಶ್ರೀ ಶ್ರೀಕಾಂತ ಪತ್ರಮರ ಹಾಗೂ ಶ್ರೀ ಕಿರಣ್ ಹಿರಿಸಾವೆಯವರೊಂದಿಗೆ ಸಂಚಾಲನ ಸಮಿತಿಯ ಸದಸ್ಯರಾದ ಶ್ರೀಮತಿ ಜಯಂತಿ ಚಂದ್ರಶೇಖರ್, ಶ್ರೀಮತಿ ಜಯಶ್ರೀ ರಾಜು, ಶ್ರೀಮತಿ ಕ್ಷಮಾ ರಘುರಾಮ್ಮ ಶ್ರೀಮತಿ ಮಾನಸ ಕೆಕೆ, ಶ್ರೀ ಅಗ್ರಹಾರ್ ಪ್ರಶಾಂತ ಅವರ ಕುಟುಂಬ ಹಾಗೂ ವಿಶೇಷ ಆಸಕ್ತಿ ವಹಿಸಿ ಶ್ರೀ ಚಿನ್ನುಪ್ರಿಯ (ವೇಣು) ಮುಂಜಾನೆಯ ಉಪಹಾರ ಮಧ್ಯದಲ್ಲಿ ಮಾವಿನ ಹಣ್ಣಿನ ರಸ ಸುಗ್ರಾಸ ಭೋಜನ ನಂತರ ಕಾರ್ಯಕ್ರಮ ಮುಗಿಸಿ ಹೋಗುವಾಗ ಸ್ನಾಕ್ಸ್ ಮತ್ತು ಕಾಫಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು.