ಕನಕಪುರ: ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಬಾಣಂತ ಮಾರಮ್ಮ ದೇವಿಯ ಅಗ್ನಿ ಕೊಂಡೋತ್ಸವ ಹಾಗೂ ಜಾತ್ರೈ ಮಹೋತ್ಸವ ಏ. 30 ರ ಮಂಗಳವಾರದಿಂದ ಆರಂಭವಾಗಲಿದೆ.
ನಗರದ ಐದು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಬಾಣಂತ ಮಾರಮ್ಮ ತಾಯಿಯ ಅಗ್ನಿ ಕೊಂಡೋತ್ಸವ ಅಂಗವಾಗಿ ಏ. 30 ರ ಸಂಜೆ ಎಳವಾರ ಕಾರ್ಯಕ್ರಮ ನಡೆಯಲಿದ್ದು, ಮಾ. 01 ಬುಧವಾರ ಬೆಳಗ್ಗೆ ದೇವಾಲಯದ ಪ್ರಧಾನ ಅರ್ಚಕರು ಅಗ್ನಿಕೊಂಡ ಪ್ರವೇಶ ಮಾಡಲಿದ್ದಾರೆ,ಮಾ.02 ಗುರುವಾರ ದಂದು ತಾಯಿಯ ರಥೋತ್ಸವ ನಡೆಯಲಿದೆ,
ಮಾ. 03 ಶುಕ್ರವಾರದಂದು ದೇವಾಲಯದ ಆವರಣದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಸಿಡಿ ಕಾರ್ಯಕ್ರಮ ನಡೆಯಲಿದ್ದು ನಗರ ಹಾಗೂ ತಾಲ್ಲೂಕಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತ ಸಮಿತಿ ಸದಸ್ಯರು ತಿಳಿಸಿದ್ದಾರೆ.