This is the title of the web page
This is the title of the web page

ಶ್ರೀರಾಮಮಂದಿರ, ಜನ್ನಾಪುರದಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ

ಬೆಂಗಳೂರು: ಶ್ರೀಶಾ ಕಲಾವೇದಿಕೆ ಹಾಗೂ ಶ್ರೀ ಸೀತಾರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಶ್ರೀ ರಾಮಮಂದಿರ, ಜನ್ನಾಪುರ, ಭದ್ರಾವತಿ ಇಲ್ಲಿ ಶ್ರೀರಾಮನವಮಿ ಹಾಗೂ ಮಹಿಳಾ ದಿನಾಚರಣೆ ಆಯೋಜಿಸಲಾಗಿತ್ತು. ಶ್ರೀರಾಮಸಂಕೀರ್ತನೆಯನ್ನು ಭಜನಾ ಮಂಡಳಿಯ ಸದಸ್ಯೆಯರು ಗುರುಗಳಾದ ಶ್ರೀಹೆಚ್.ಸಿ.ನಾರಾಯಣಶೆಟ್ಟರು ಇವರ ನೇತೃತ್ವದಲ್ಲಿ ಬಹಳ ಚೆನ್ನಾಗಿ ನಡೆಸಿದರು.

ನಂತರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀಮತಿ ಮಂಜುಳಾ ಪ್ರಾರ್ಥನೆ ಮಾಡಿದರೆ ಶ್ರೀಮತಿ ವನಿತಾ ಎಲ್ಲರನ್ನೂ ಸ್ವಾಗತಿಸಿದರು. ಮಹಿಳೆಯರು ಮತ್ತು ಮಕ್ಕಳಿಗೆ ಬಾಲ್ ಎಸೆಯುವುದು, ಮ್ಯೂಸಿಕಲ್ ಛೇರ್, ಜ್ಞಾಪಕ ಶಕ್ತಿ, ಮೇಣದಬತ್ತಿ ಹಚ್ಚುವುದು, ಪಿಕ್ ಅಂಡ್ ಆಕ್ಟ್ ಆಟಗಳನ್ನು ಆಡಿಸಲಾಯಿತು.

ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಐದರಿಂದ ಎಂಬತ್ತು ವಯಸ್ಸಿನ ಮಕ್ಕಳು, ಮಹಿಳೆಯರು ಎಲ್ಲಾ ಆಟಗಳಲ್ಲಿ, ಹಾಡು, ನೃತ್ಯಗಳಲ್ಲಿ ಅತ್ಯುತ್ಸಾಹದಿಂದ ಸಂತೋಷದಿಂದ ಪಾಲ್ಗೊಂಡಿದ್ದು ಎಲ್ಲರಲ್ಲೂ ಹರ್ಷ ತಂದಿತು… ಹಾಗೆಯೇ ಇನ್ನೂ ಮುಂದಿನ ದಿನಗಳಲ್ಲಿ ಹೀಗೆಯೇ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಎಲ್ಲರಿಂದಲೂ ಅಭಿಪ್ರಾಯ ಬಂದಿದ್ದು , ವಿವಿಧ ರೀತಿಯ ಸೇವಾ ಕಾರ್ಯಗಳನ್ನು ಆಯೋಜನೆ ಮಾಡುವ ಆಲೋಚನೆ ಮಾಡಲು ಉತ್ಸಾಹ ಬಂದಂತಾಯಿತು.

ಕಾರ್ಯಕ್ರಮವು ಸಂಭ್ರಮದಿಂದ ನಡೆದಿರುವುದಕ್ಕೆ ಶ್ರೀಮತಿ ಭಾರತಿ ಜಯರಾಮ್ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ನಂತರ ಶ್ರೀಶಾ ಕಲಾ ವೇದಿಕೆ ವತಿಯಿಂದ ಆಶಾ ಶ್ರೀಧರ್ ಅವರು ಎಲ್ಲರಿಗೂ ಸಿಹಿಯನ್ನು ಹಂಚಿದರು.
ವರದಿ: ಆಶಾ ಶ್ರೀಧರ್, ಶಂಕರಘಟ್ಟ.