ಬೇಲೂರು: ತಾಲೂಕಿನ ಸಂಕೇನಹಳ್ಳಿ ಗ್ರಾಮದಲ್ಲಿ ಬೀಸಿದ ಭಾರೀ ಬಿರುಗಾಳಿಗೆ ರೈತ ಕುಟುಂಬದ ಮನೆ ಮೇಲೆ ಹಾಕಿದ್ದ ಸಿಮೆಂಟ್ ಛಾವಣಿ ಹಾರಿ ಹೋಗಿರುವ ಘಟನೆ ನಡೆದಿದೆ.ಭಾರಿ ಬಿರುಗಾಳಿಗೆ ಸಂಕೇನಹಳ್ಳಿ ಗ್ರಾಮದ ರೈತ ಮಹಿಳೆ ಮುಳ್ಳಮ್ಮ ಅವರ ಮಗ ಅಣ್ಣಪ್ಪ ಎಂಬುವವರು ಇತ್ತೀಚೆಗಷ್ಟೆ ಸಾಲಮಾಡಿ ರೂ.60 ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ಸಿಮೆಂಟ್ ಶೀಟ್ ಸಂಪೂರ್ಣವಾಗಿ ಹಾರಿ ಹೋಗಿದೆ.
ಜೊತೆಗೆ ಮನೆ ಗೋಡೆಗಳು ಸಹ ಬಿರುಕು ಬಿಟ್ಟು ಹಾನಿಯಾಗಿರುವ ಬಗ್ಗೆ ತಿಳಿದು ಬಂದಿದೆ. ಶೀಟ್ಗಳು 20 ಅಡಿ ದೂರದಲ್ಲಿ ಗಾಳಿಗೆ ಹಾರಿಹೋಗಿ ಬಿದ್ದಿದೆ. ಈ ಸಂದರ್ಭದಲ್ಲಿ ಕುಟುಂಬದವರು ಜಮೀನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.ಹಾಗೂ ಮನೆಯಲ್ಲಿ ಅಣ್ಣಪ್ಪರವರ ಮಗ ಮನೆಯೊಳಗಿದ್ದರೂ ಅದೃಷ್ಟವಶಾತ್ ಯಾವುದೇ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ .
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮನೆಯ ಮಾಲೀಕರಾದ ಮುಳ್ಳಮ್ಮ ಇತ್ತೀಚಿಗಷ್ಟೇ ನಾವು ಸಾಲಮಾಡಿ ಮನೆಗೆ ಮೇಲ್ಛಾವಣಿ ನಿರ್ಮಿಸಿದ್ದೆವು.ಆದರೆ ಏಕಾಏಕಿ ಬಂದಂತ ಬಿರುಗಾಳಿಗೆ ಎಲ್ಲವೂ ಹಾರಿಹೋಗಿದ್ದು ಇದರಿಂದ 60 ಸಾವಿರಕ್ಕೂ ಹೆಚ್ಚು ನಷ್ಠವಾಗಿದೆ.ಮತ್ತೆ ಮನೆ ನಿರ್ಮಿಸಲು ನಮ್ಮ ಹತ್ತಿರ ಹಣ ಇಲ್ಲದಾಗಿದೆ.ಅದ್ದರಿಂದ ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.