ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭಗೊಂಡಿದ್ದು, ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದೆ.
ಮೊದಲ ಹಂತದಲ್ಲಿ ಮನೆಗಳ ಗಣತಿ ಮತ್ತು ಎರಡನೇ ಹಂತದಲ್ಲಿ ಜನ ಗಣತಿ ನಡೆಯಲಿದೆ. ಇಂದಿನಿಂದ ಸ್ವಯಂ ಗಣತಿ ಕೂಡ ಆರಂಭವಾಗಿದೆ. ಸ್ವಯಂ ಗಣತಿಯಲ್ಲಿ ಸ್ವತಃವಾಗಿ ಜನರೇ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬಹುದು. ಗಣತಿಯ ವೆಬ್ ಪೋರ್ಟಲ್ನಲ್ಲಿ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ಮನೆಯ ಯಾವುದೇ ಒಬ್ಬ ಸದಸ್ಯರು ವೆಬ್ ಪೋರ್ಟಲ್ ಮೂಲಕ ಮನೆಯ ವಿವರಗಳನ್ನ ದಾಖಲಿಸಬಹುದು.



