ಬೆಂಗಳೂರು: ಆಸ್ಪತ್ರೆ, ಶಾಲೆ ಏರ್ಪೋಟ್ಗೆ ವಾಣಿಜ್ಯ ಸಿಲಿಂಡರ್ ಸಿಗುತ್ತಿದೆ ರಾಜ್ಯದಲ್ಲಿ 3 ಲಕ್ಷ ಜನ ಆಟೋ ಗ್ಯಾಸ್ ಬಳಕೆ ಮಾಡುತ್ತಿದ್ದಾರೆ. ಗ್ಯಾಸ್ ದರ ಏರಿಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಆಗ್ರಹಿಸಿದ್ದಾರೆ ರಾಜ್ಯದ ಹಲವಡೆ ಗ್ಯಾಸ್ ಸಿಲಿಂಡರ್ ಗಳ ಅಭಾವ ಹಿನ್ನೆಲೆಯಲ್ಲಿ, ಇಂದು RPCT , HPCL, LOCL ಅಧಿಕಾರಿಗಳ ಜೊತೆ ಬೆಂಗಳೂರಿನ ವಸಂತನಗರದಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಭೆಯಲ್ಲಿ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟೋ ಗ್ಯಾಸ್ ನಲ್ಲಿ ಸುಧಾರಣೆ ಆಗಿಲ್ಲ ಈ ವಿಚಾರವಾಗಿ ನಾವು ಸಹ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ



