ಚಳ್ಳಕೆರೆ: ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಅವರು ನಗರಂಗೆರೆ ರಸ್ತೆಯ ಸಮೀಪವಿರು ವಾಗ್ದೇವಿ ಪಬ್ಲಿಕ್ ಶಾಲೆ ಶಾಲಾ ವಾರ್ಷಿಕೋತ್ಸವ ಹಾಗೂ ಸಿರಿ ಸಿಂಚನ ಸಾಂಸ್ಕೃತಿಕಾ ಕಾರ್ಯಕ್ರಮದ ಭಾಗವಹಿಸಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆ ಕಟ್ಟಿ ಶಿಕ್ಷಣ ಕಲಿಸುವುದು ತುಂಬಾ ಜವಾಬ್ದಾರಿಯ ಕೆಲಸವಾಗಿದೆ. ನಾನು ಸಹ ಶಿಕ್ಷಣ ಸಂಸ್ಥೆ ನಡೆಸುವವಳಾಗಿ ಸಂಪೂರ್ಣವಾಗಿ ತಿಳಿದಿದ್ದೇನೆ. ಚಿಕ್ಕಣ್ಣ ಇವರು ಸಂಸ್ಥೆ ಕಟ್ಟಿ ಬೆಳಸಿ ಈ ಭಾಗದ ಬಡ ಮಕ್ಕಳಿಗೆ ವಿದ್ಯದಾನ ಮಾಡುತ್ತಿದ್ದಾರೆ. ಪೋಷಕರು ಸಹ ಅಷ್ಟೇ ಜವಾಬ್ದಾರಿಯಿಂದ ಮಕ್ಕಳನ್ನು ಶಾಲೆಗೆ ಕಳಿಸಬೇಕು. ಪ್ರತಿಯೊಬ್ಬರಿಗೂ ಶಿಕ್ಷಣವೇ ಶಕ್ತಿಯಾಗಿದೆ ಇಂದು ಶಿಕ್ಷಣವಿದ್ದರೆ ಏನು ಬೇಕಾದರು ಸಾಧಿಸಬಹುದು ಎಂದರು.
ಮುಖಂಡ ಕೆ.ಟಿ.ಕುಮಾರಸ್ವಾಮಿ ಮಾತನಾಡಿ ಶಾಲೆಗಳಲ್ಲಿ ಎಲ್ಲ ಭಾಷೆಗಿಂತ ಕನ್ನಡ ಭಾಷೆಗೆ ಆದ್ಯತೆ ನೀಡಿ. ಕಲಿಯೋಕೆ ನೂರು ಭಾಷೆ ಆದರೆ ಮಾತಾಡಕ್ಕೆ ಕನ್ನಡ ಭಾಷೆ ಮಾತ್ರ. ಚಿಕ್ಕಣ್ಣ ಇವರು ಎರಡು ಕಡೆ ಶಾಲೆಗಳನ್ನು ತೆರೆದು ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಈ ಸಂಸ್ಥೆಯನ್ನು ಉತ್ತಮವಾಗಿ ದೊಡ್ಡ ಮಟ್ಟದಲ್ಲಿ ಬೆಳೆಸಲಿ ಈ ಶಾಲೆಯಿಂದ ನೂರಾರು ಮಕ್ಕಳು ಶಿಕ್ಷಣವಂತರಾಗಲಿ ಎಂದರು.
ಶಿಕ್ಷಣ ಸಂಸ್ಥೆ ಸ್ಥಾಪಕ ಅಧ್ಯಕ್ಷ ಚಿಕ್ಕಣ್ಣ ಮಾತನಾಡಿ ಬಡ ಗ್ರಾಮೀಣ ಭಾಗದಿಂದ ಬಂದ ನಾನು ವಿದ್ಯವಂತ ನಾಗಲು ಎಷ್ಟು ಕಷ್ಟ ಎಂದು ನನಗೆ ಅನುಭವವಾಗಿದೆ. ಆದ್ದರಿಂದ ಬಡ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂದು ಈ ಶಾಲೆಯನ್ನು ಪ್ರಾರಂಬಿಸಿದ್ದೇನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಟ್ಟಿ ರುದ್ರಪ್ಪ ಹಾಗೂ ವಕೀಲ ಶ್ರೀನಿವಾಸ್, ಶಿಕ್ಷಕ ಈರಣ್ಣ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ನಗರಂಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರಸ್ವಾಮಿ. ನಗರಸಭೆ ನಾಮನಿರ್ದೇಶನ ಸದಸ್ಯ ವೀರೇಶ್ ಮುಖಂಡರಾದ ಜಿ.ಕೆ.ವೀರಣ್ಣ ಉಪನ್ಯಾಸಕ ಡಿ.ಟಿ.ಸುರೇಶ್, ಶ್ರೀಕಂಠಯ್ಯ, ಚಿತ್ತಯ್ಯ, ಎಸ್ ವೀರಣ್ಣ,ಮಹಾಲಿಂಗಪ್ಪ,ಬಸವರಾಜ್. ಗಿರೀಶ, ಇಂಡಸ್ಟ್ ವ್ಯಾಲಿ ಪಬ್ಲಿಕ್ ಶಾಲೆಯ ಶಿಕ್ಷಕಿಯರು, ವಾಗ್ದೇವಿ ಪಬ್ಲಿಕ್ ಶಾಲೆಯ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Leave a Review