ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿ ದೂರಾಗುತ್ತಿದ್ದಾರೆ. ಇಬ್ಬರೂ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಚರ್ಚೆಯ ನಡುವೆ ಇಬ್ಬರಿಗೂ ಇದೀಗ ವಿಚ್ಛೇದನ ಮಂಜೂರು ಆಗಿರುವ ಸುದ್ದಿ ಬಂದಿದೆ. ಬಹಳ ಹಿಂದೆಯೇ ಇಬ್ಬರೂ ಪರಸ್ಪರ ಒಪ್ಪಿ ವಿಚ್ಛೇದನ ಪಡೆಯಲು ಮುಂದಾಗಿದ್ದರು. ಆಗಲೇ ಅರ್ಜಿ ಸಲ್ಲಿಸಿದ್ದು ಇದೀಗ ವಿಚಾರಣೆ ನಡೆದು ವಿಚ್ಛೇದನ ಅಧಿಕೃತವಾಗಿದೆ.
ಪರಸ್ಪರ ಪ್ರೀತಿಸಿ ಮದುವೆ ಮದುವೆ ಆಗಿದ್ದ ಚಂದನ್- ನಿವೇದಿತಾ ದೂರಾಗಿರುವ ವಿಚಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ‘ಕೋಟಿ’ ಸಿನಿಮಾ ಪ್ರಮೋಷನ್ ವಿಡಿಯೋದಲ್ಲಿ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇನ್ನು 20 ದಿನಗಳ ಹಿಂದೆ ನಿವೇದಿತಾ ಹುಟ್ಟುಹಬ್ಬಕ್ಕೆ ಹ್ಯಾಪಿ ಬರ್ತ್ಡೇ ಲವ್ ಎಂದು ಬರೆದು ಚಂದನ್ ಶೆಟ್ಟಿ ಪೋಸ್ಟ್ ಮಾಡಿದ್ದರು. ವಿಚ್ಛೇದನ ವಿಚಾರವನ್ನು ರಹಸ್ಯವಾಗಿ ಕಾಪಾಡಿಕೊಂಡಿದ್ದ ಜೋಡಿ ಇದೀಗ ದೂರಾಗಿದ್ದಾರೆ.
ಸಂಧಾನ ಫಲಪ್ರದವಾಗದ ಕಾರಣ ಅಂತಿಮವಾಗಿ ಬೆಂಗಳೂರು ಕೌಂಟುಂಬಿಕ ನ್ಯಾಯಾಲಯ ಚಂದನ್- ನಿವೇದಿತಾಗೆ ವಿಚ್ಛೇದನಕ್ಕೆ ಅಸ್ತು ಎಂದಿದೆ. ಕೇಸ್ ನಂಬರ್-ಒಛಿ 3388-/2024, 13b ಫ್ಯಾಮಿಲಿ ಕೋರ್ಟ್ ಆಕ್ಟ್ ಅಡಿ ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ. ನ್ಯಾಯಾಧೀಶರ ಮುಂದೆ ಇಬ್ಬರೂ “ಪರಸ್ಪರ ದೂರಾಗಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಕಾರಣ ಕೇಳಿದಾಗ ಸ್ವಲ್ಪ ಭಿನ್ನಾಭಿಪ್ರಾಯ ಇದೆ, ಇಬ್ಬರಿಗೂ ಕರಿಯರ್ ಬಗ್ಗೆ ಕನಸುಗಳು ಇವೆ, ಹೀಗಾಗಿ ಖುಷಿಯಾಗಿಯೇ ಒಪ್ಪಿದ್ದೇವೆ” ಎಂದಿದ್ದಾರೆ. ಇನ್ನು ಚಂದನ್ ಶೆಟ್ಟಿ ಮಗು ಪಡೆಯುವ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದರು. ಆದರೆ ನಿವೇದಿತಾಗೆ ತಾಯಿ ಆಗುವ ಆಸಿ ಇರಲಿಲ್ಲ. ಬಣ್ಣದಲೋಕದಲ್ಲಿ ಸಾಧಿಸುವ ಆಸಕ್ತಿ ಇತ್ತು. ಮಗು ಮಾಡಿಕೊಳ್ಳುವ ವಿಚಾರಕ್ಕೆ ಇಬ್ಬರೂ ಚರ್ಚೆ ನಡೆಸಿದ್ದರು. ಆದರೆ ಮಗು ಮಾಡಿಕೊಂಡರೆ ಕರಿಯರ್ ಕಟ್ಟಿಕೊಳ್ಳೋದು ಕಷ್ಟ ಎನ್ನುವ ಕಾರಣಕ್ಕೆ ಡಿವೋರ್ಸ್ ನಿರ್ಧಾರಕ್ಕೆ ಬಂದರು ಎನ್ನಲಾಗ್ತಿದೆ. ಶೀಘ್ರದಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.