ಯಾವುದೇ ಕ್ರೀಡೆಯಲ್ಲಿ ಗೆದ್ದ ಸ್ಪರ್ಧಿ ಸಂಭ್ರಮಾಚರಿಸುವುದು ಇದ್ದಿದ್ದೇ. ಆದರೆ ಎದುರಾಳಿಯ ರಾಜನನ್ನು ಪ್ರೇಕ್ಷಕರ ಕಡೆಗೆ ಎಸೆಯುವುದೆಂದರೆ ಅಬ್ಬಬ್ಬಾ ಗೆದ್ದವನಿಗೆ ಇಷ್ಟೊಂದು ದಾರ್ಷ್ಟ÷್ಯವೇ ಅದೂ ವಿಶ್ವ ಚಾಂಪಿಯನ್ ಗುಕೇಶ್ ದೊಮ್ಮರಾಜು ಮುಂದೆ. ಇದನ್ನು ಬಿಲ್ ಕುಲ್ ಒಪ್ಪಲು ಸಾಧ್ಯವಿಲ್ಲ. ಮೊದಲು ಈ ದುರಹಂಕಾರಿ ಹಿಕಾರು ನಕಮುರಾ ಅವರನ್ನು ಚೆಸ್ ನಿಂದಲೇ ಬ್ಯಾನ್ ಮಾಡಿ.
ಭಾನುವಾರದಂದು ಅಮೆರಿಕದ ಅರ್ಲಿಂಗ್ ಟನ್ ನ ಎಸ್ಪೋರ್ಟ್್ಸ ಕ್ರೀಡಾಂಗಣದಲ್ಲಿ ನಡೆದ ‘ಚೆಕ್ಮೇಟ್: ಯುಎಸ್ಎ vs ಇಂಡಿಯಾ’ ಎAಬ ಅಸಾಮಾನ್ಯ ಚೆಸ್ ಪ್ರದರ್ಶನ ಪಂದ್ಯದ ಅAತಿಮ ದೃಶ್ಯ ಗಂಟೆ ಕಳೆಯುವುದರೊಳಗೆ ಪ್ರಪಂಪದಾದ್ಯAತ ವೈರಲ್ ಆಗಿ ಚೆಸ್ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದರಲ್ವಾ ಬಹುಷಃ ನೀವೂ ಈ ವಿಡಿಯೋ ನೋಡಿದ್ದಿದ್ದರೆ ನಿಮಗೂ ಹೀಗೆ ಅನ್ನಿಸಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕ್ಲಿಪ್ಪಿಂಗ್ ಭಾರೀ ಚರ್ಚೆಗೆ ಎಡೆ ಮಾಡಿತ್ತು.
ಭಾರತ ಮತ್ತು ಅಮೆರಿಕದ ನಾಗರಿಕರು ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಸುತ್ತಿರಬೇಕಾದರೆ ತಲೆಯೇ ಇಲ್ಲದ ಪಾಕಿಸ್ತಾನದ ನೆಟ್ಟಿಗರೂ ಮಧ್ಯೆ ಬಂದು ಸೇರಿಕೊAಡಿದ್ದರು. ಇದು ಮ್ಯಾಗ್ನಸ್ ಕಾಲ್ಸ್ ಸನ್ ಅವರು ಗುಕೇಶ್ ವಿರುದ್ಧ ಸೋತಾಗ ಮೇಜು ಕುಟ್ಟಿದ್ದಕ್ಕಿಂತಲೂ ಘನಘೋರ ಅಪರಾಧವಾಗಿ ಕಂಡಿತು ಚೆಸ್ ಪ್ರಿಯರಿಗೆ. ಸ್ವಲ್ಪ ನಿಲ್ಲಿ. ಆ ವಿಡಿಯೋವನ್ನು ಸ್ವಲ್ಪ ಸೂಕ್ಷ÷್ಮವಾಗಿ ಗಮನಿಸಿದ್ದೀರಾ ಹಿಕಾರು ನಕಮುರಾನ ಈ ಎಲ್ಲಾ ನಕರಾಗಳನ್ನು ನೋಡಿಯೂ ನಮ್ಮ ಗುಕೇಶ್ ಮಾತ್ರ ಮಹಾಭಾರತದ ಶ್ರೀಕೃಷ್ಣನ ಹಾಗೆ ಮುಗುಳ್ನಗುತ್ತಿದ್ದ ಅಲ್ವೇ ಹಾಗಿದ್ದರೆ ಏನಿದರ ಮರ್ಮ ವಿಷಯ ಇರುವುದು ಅಲ್ಲೇ. ಇದರ ಸತ್ಯಾಸತ್ಯತೆಯನ್ನು ತಿಳಿದರೆ ಈ ಅಮೆರಿಕದ ಫಟಿಂಗರು ಚೆಸ್ ಅನ್ನು ಎಲ್ಲಿ ತೆಗೆದುಕೊಂಡು ಹೋದರು ಎಂದು ನಿಮಗೆ ಅನ್ನಿಸದೇ ಇರಲಿಕ್ಕಿಲ್ಲ. ಈಗ ಅಲ್ಲಿಗೇ ಬರೋಣ.
ನೀವು ಡಬ್ಲೂ÷್ಯಡಬ್ಲೂ÷್ಯಎಫ್, ಡಬ್ಲೂ÷್ಯಡಬ್ಲೂ÷್ಯಇ ಮುಂತಾದ ಕುಸ್ತಿಯ ವಿಕಾರಗಳನ್ನು ನೋಡಿಯೇ ಇರುತ್ತೀರಲ್ಲವೇ? ಅದೇ ಮಾದರಿಗೆ ಇದೀಗ ಚೆಸ್ ಅನ್ನು ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಸದ್ಯಕ್ಕೆ ಸ್ಪರ್ಧಿಗಳು ಹೊಡೆದಾಡಿಕೊಂಡಿಲ್ಲ ಎAಬುದನ್ನು ಬಿಟ್ಟರೆ ಮತ್ತೆಲ್ಲಾ ಯಥಾವತ್
ಆಗಿ ಅಲ್ಲಿ ನಡೆದಿವೆ.
ಕ್ರೀಡೆ ಮತ್ತು ಮನರಂಜನೆಇರಲಿ, ಈಗ ಮುಖ್ಯ ವಿಷಯಕ್ಕೇ ಬರೋಣ. ಅಮೆರಿಕದಲ್ಲಿ ಚೆಸ್ ಅನ್ನು ಇದೀಗ ಮನರಂಜನೆಯ ಕ್ರೀಡೆಯನ್ನಾಗಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನವಿದು. ಜಗಮಗಿಸುವ ಕಲರ್ ಫುಲ್ ಎಲ್ ಇಡಿ ವೇದಿಕೆ, ಕಿವಿಗಡಚಿಕ್ಕುವ ಹಿನ್ನಲೆ ಸಂಗೀತ, ಅದಕ್ಕಿAತಲೂ ಕರ್ಕಶವಾದ ನಿರೂಪಣೆ,
ವೇದಿಕೆಯ ಕೆಳಭಾಗದಲ್ಲಿ ಸಾವಿರಾರು ಪ್ರೇಕ್ಷಕರು, ಶಿಳ್ಳೆ, ಚಪ್ಪಾಳೆ, ಘೋಷಣೆ, ಕೂಗು, ಆ ಪ್ರೇಕ್ಷಕರ ಮಧ್ಯದಿಂದ ಉತ್ಸಾಹದಲ್ಲಿ ಎಲ್ಲರಿಗೂ ಹೈಫೈ ಮಾಡುತ್ತಾ ಬರುವ ಸ್ಪರ್ಧಿಗಳು ಹಾ ಹೌದು ಸೇಮ್ ಟು ಸೇಮ್ ಪ್ರೊ ಕಬಡ್ಡಿ, ರಸ್ಲಿಂಗ್ ನಲ್ಲಿ ಕಾಣಸಿಗುವ ದೃಶ್ಯಮತ್ತು ವಾತಾವರಣ!.