ತಿ.ನರಸೀಪುರ: ಶ್ರೀಗ್ಲೂಕೋ ಬಯೋಟೆಕ್ ಪ್ರೈ.ಲಿ. ಹೊರ ಹಾಕುವ ರಾಸಾಯನಿಕ ಯುಕ್ತ ನೀರಿನಿಂದ ಜನ ಮತ್ತು ಜಾನುವಾರಗಳ ಸಾವು ಸಂಭವಿಸಿದರೆ ಕಾರ್ಖಾನೆ ಮಾಲೀಕ ಹಾಗೂ ವರುಣಾ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿಗಳು ಆದ ಸಿದ್ದರಾಮಯ್ಯರವರೇ ನೇರ ಹೊಣೆ ಎಂದು ರೈತ ಗೆಜ್ಜಗನಹಳ್ಳಿ ಪ್ರಕಾಶ್ ಗಂಭೀರ ಆರೋಪ ಮಾಡಿದರು.
ತಾಯೂರು ಗೇಟ್ ಗೆಜ್ಜಗನಹಳ್ಳಿ ಗ್ರಾಮದಲ್ಲಿರುವ ಶ್ರೀಗ್ಲೂಕೋ ಬಯೋಟೆಕ್ ಪ್ರೈ.ಲಿ. ತನ್ನ ತ್ಯಾಜ್ಯ ನೀರನ್ನು ಯಾವುದೇ ಫಿಲ್ಟರ್ ಮಾಡದೆ ನೇರವಾಗಿ ಕಾಲುವೆ ಮೂಲಕ ಹರಿ ಬಿಟ್ಟು ಸುತ್ತ ಮುತ್ತಲಿನ ಗ್ರಾಮಗಳ ನೈರ್ಮಲ್ಯ ಹಾಳು ಮಾಡಿದೆ ಈ ಬಗ್ಗೆ ಹಿಂದಿನ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಈಗಿನ ಶಾಸಕರು ಮುಖ್ಯಮಂತ್ರಿಗಳು ಆದ ಸಿದ್ದರಾಮಯ್ಯ ಸೇರಿ ಸಂಬಂಧಿಸಿದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೂ ತಂದಿದ್ದರು ಸಹ ಸಮಸ್ಯ ಬಗೆ ಹರಿದಿಲ್ಲ ಎಂದು ಸುದ್ದಿಗಾರರ ಬಳಿ ನೋವು ತೊಡಿಕೊಂಡರು.
ಕಲುಷಿತ ನೀರು ಅಂರ್ತಜಲ ಸೇರಿದೆ: ಫ್ಯಾಕ್ಟರಿಯಿಂದ ಬರುವ ಕಲುಷಿತ ನೀರನ್ನ ಪ್ಯಾಕ್ಟರಿಯವರು ಫಿಲ್ಟರ್ ಮಾಡದೆ ರಾತ್ರೊ ರಾತ್ರಿ ಕಾಲುವೆಗೆ ಹರಿ ಬಿಡುತ್ತಾರೆ.ಕಾಲುವೆ ಮೂಲಕ ಅಡ್ಡಾಳ ಹಾಗೂ ಕಟ್ಟೆಗಳಿಗೆ ಸೇರಿ ಅಲ್ಲಿ ಶೇಖರಣೆ ಗೊಳ್ಳುತ್ತಿರುವ ಪರಿಣಾಮ ಕೊಳವೆ ಬಾವಿ ನೀರಿಗೆ ಈ ರಾಸಾಯನಿಕಯುಕ್ತ ನೀರು ಮಿಶ್ರಣ ಗೊಂಡು ನೀರು ಕೆಟ್ಟವಾಸನೆ ಬರುತ್ತಿದ್ದು ಬಳಕೆ ಮಾಡಲು ಆಗುತ್ತಿಲ್ಲ.
ಬೇಳೆ ಹಾಳಾಗುತ್ತಿವೆ: ಕಾರ್ಖಾನೆ ಯಿಂದ ಹೊರ ಬರುತ್ತಿರುವ ರಾಸಾಯನಯುಕ್ತ ನೀರು ಕೊಳವೆ ಬಾವಿಗಳಿಗೆ ಸೇರುವುದರಿಂದ ಆ ನೀರನ್ನ ಬೆಳೆಗಳಿಗೆ ಹಾಯಿಸಿದರೆ ಬೆಳೆ ಸಾಯುತ್ತಿದೆ ಈಗಾಗಲೇ ಕಬ್ಬು ,ಬಾಳೆ.ಟೊಮ್ಯಾಟೊ ಸೇರಿದಂತೆ ಹಲವು ಬೆಳೆಗಾಲು ಹಾಳಾಗಿ ನಷ್ಟ ಅನುಭವಿಸಿದ್ದೇವೆ ಈ ನೋವನ್ನ ಶಾಸಕರು.ಅಧಿಕಾರಿಗಳ ಬಳಿ ತೊಡಿ ಕೊಂಡರು ಸಹ ಪ್ರಯೋಜನವಾಗದೆ ನೊಂದು ಬೆಂದಿದ್ದೇವೆ ಎಂದು ಅಳಲು ತೊಡಿಕೊಂಡರು.
ಜಾನುವಾರುಗಳ ಆರೋಗ್ಯ ಹಾಳಾಗುತ್ತಿದೆ: ಕಾರ್ಖಾನೆ ಹೊರ ಬಿಟ್ಟಿರುವ ಕಲುಷಿತ ನೀರು ಕಾಲುವೆಯಲ್ಲಿ ಹರಿದು ಅಡ್ಡಾಳ,ಕಟ್ಟೆ ಸೇರುವುದರಿಂದ ಬಾಯಾರಿಕೆ ಆದ ಜಾನುವಾರಗಳು ಅದೇ ನೀರನ್ನು ಕುಡಿದು ಕಾಯಿಲೆ ಹೆಚ್ಚಾಗುತ್ತಿವೆ ಅಲ್ಲದೆ ಹಸುಗಳ ಸಾವು ಕೂಡ ಸಂಭವಿಸಿವೆ ಎಂದು ಬೇಸರ ವ್ಯವಸ್ಥೆಪಡಿದರು.
ಕುಡಿಯುವ ನೀರಿಗೆ ತೊಂದರೆ: ಕಾರ್ಖಾನೆಯವರು ಬಿಟ್ಟಿರುವ ಕೆಟ್ಟ ನೀರಿನಿಂದ ಜಮೀನಿನ ಕೊಳವೆ ಬಾವಿಯ ನೀರು ತೀರ ಹದಗೆಟ್ಟಿದ್ದು ಕುಡಿಯುವ ನೀರಿಗೆ ಪರದಾಡ ಬೇಕಾಗಿದೆ ಜಮೀನಿನಲ್ಲಿ ಕೆಲಸ ಮಾಡುವಾಗ ಕುಡಿಯುವ ನೀರಿಗೆ ಕಿ.ಮೀ ಗಟ್ತಲೆ ನಡೆಯಬೇಕಾಗಿದೆ ಎಂದರು.
ಕಾರ್ಖಾನೆ ಜೊತೆ ಶಾಮೀಲು: ಸ್ಥಳೀಯ ಗ್ರಾಮ ಪಂಚಾಯತಿ ಯಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾ.ಪಂ. ಹಾಗೂ ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರು ಸೇರಿದಂತೆ ಶಾಸಕರು .ಸಂಸದರು ಸಹ ಕಾರ್ಖಾನೆ ಮಾಲೀಕರ ಮೇಲೆ ಕಟ್ಟು ನಿಟ್ಟಿನ ಕ್ರಮ ವಹಿಸದೆ ಇರುವುದು ಅವರ ಜೊತೆ ಶಾಮೀಲ್ ಆಗಿದ್ದಾರೆ ಎಂಬ ಅನುಮಾನ ನಮ್ಮಲ್ಲಿ ಕಾಡುತ್ತಿದೆ ಎಂದು ರೈತರು ಆಕ್ರೋಶ ಹೊರ ಹಾಕಿದರು.
ಮಾಲೀನ್ಯ ಅಧಿಕಾರಿಗಳು ಸಹ ಕಾರ್ಖಾನೆಯವರ ಕೈಗೊಬ್ಬೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ಈ ಕಾರ್ಖಾನೆ ಹೊರ ಬಿಟ್ಟಿರುವ ಕಲುಷಿತ ನೀರಿನ ಮಾದರಿ ಸಂಗ್ರಹಿಸಿ ಹೋಗಿದ್ದರು ಸಹ ಯಾವುದೇ ಕ್ರಮವಹಿಸಿಲ್ಲ ಹಾಗಾಗಿ ಇವರು ಸಹ ಕಾರ್ಖಾನೆ ಮಾಲೀಕರ ಕೈಗೊಂಬೆಯಾಗಿದ್ದಾರೆ ಎಂಬ ಶಂಕೆ ಇದೆ ಎಂದರು.
ಕೆಟ್ಟ ವಾಸನೆ ಮತ್ತು ಧೂಳು: ಕಾರ್ಖಾನೆ ಯಿಂದ ಹೊರ ಬರುವ ಗಾಳಿ ದುರ್ವಾಸನೆ ಯಿಂದ ಕೂಡಿದ್ದು ಈ ವ್ಯಾಪ್ತಿಯ ಗ್ರಾಮಗಳ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಹಾಗೂ ಕಾರ್ಖಾನೆ ಯಿಂದ ಹೊರ ಬೀಳುತ್ತಿರುವ ಧೂಳು ಫಸಲಿನ ಮೇಲೆ ಬಿದ್ದು ಫಸಲು ಒಣಗಿ ಹೋಗುತ್ತಿವೆ ಎಂದು ಕಣ್ಣೀರು ಹಾಕಿದರು.
ಒಟ್ಟಾರೆ ಶ್ರೀಗ್ಲೂಕೋ ಬಯೋಟೆಕ್ ಪ್ರೈ.ಲಿ. ಕಾರ್ಖಾನೆ ಯಿಂದ ಸುತ್ತ ಮುತ್ತಲಿನ ರೈತರ ಬದುಕು ಬೀದಿಗೆ ಬಂದಿದೆ ನಮ್ಮ ನೋವು ಯಾರು ಕೇಳುವವರೆ ಇಲ್ಲ ಕಾರ್ಖಾನೆಯವರನ್ನ ಮನವಿ ಮಾಡಿದರು ಸಹ ನಮ್ಮ ನೋವಿನ ಮನವಿಗೆ ಅವರು ಕರಗುತ್ತಿಲ್ಲ ಕೂಡಲೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರು ನಮ್ಮ ಬದುಕನ್ನ ಉಳಿಸಿಕೂಡಬೇಕೆಂದು ಮನವಿ ಮಾಡುತ್ತೇವೆ ಎಂದರು.