ಐಪಿಎಲ್ ೨೦೨೬ರ ಹರಾಜು ಪ್ರಕ್ರಿಯೆಗೆ ಆಟಗಾರರ ಉಳಿಕೆ (ಖeಣeಟಿಣioಟಿ) ಗಡುವು ಸಹ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ಆಟಗಾರರ ವರ್ಗಾವಣೆ ಬಗ್ಗೆ ಕಳೆದ ಕೆಲವು
ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಚೆನ್ನೆöÊ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಟ್ರೇಡ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂಬ ಮಾತು ಕಳೆದ ಕೆಲ ತಿಂಗಳಿAದ ಕೇಳಿ ಬರುತ್ತಿದ್ದು ಈ ಸಂದರ್ಭದಲ್ಲಿ ಅದು ಮತ್ತಷ್ಟು ಹೆಚ್ಚಾಗಿದೆ. ಇದೀಗ
ಚೆನ್ನೆöÊ ಸೂಪರ್ ಕಿಂಗ್ಸ್ (ಅSಏ) ತಂಡ ತನ್ನ ಸಿಇಒ ಕಾಸಿ ವಿಶ್ವನಾಥನ್ ಮತ್ತು ತಂಡದ ಮ್ಯಾಸ್ಕಾಟ್ ‘ಲಿಯೋ’ ಒಳಗೊಂಡ ಒಂದು ಹಾಸ್ಯಮಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.
೨೦೧೮ ರಿಂದ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿ ಸಂಜು ಸ್ಯಾಮ್ಸನ್ ಅವರು ೨೦೨೧ ರಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಅವರು ಹೊಸ ತಂಡಕ್ಕೆ ಸೇರಲು ಪ್ರಯತ್ನಿಸುತ್ತಿದ್ದು ಚೆನ್ನೆöÊ ಸೂಪರ್ ಕಿಂಗ್ಸ್ ಅವರನ್ನು ಖರೀದಿಸಲು ಉತ್ಸುಕವಾಗಿದೆ. ಹೀಗಾಗಿ ಟ್ರೇಡ್ ಗಾಗಿ ಸಿಎಸ್ ಕೆಯು ರಾಜಸ್ಥಾನ ರಾಯಲ್ಸ್ ತಂಡದೊAದಿಗೆ ಮಾತುಕತೆಗಳನ್ನು ಆರಂಭಿಸಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವರದಿಗಳ ಪ್ರಕಾರ, ರಾಜಸ್ಥಾನ ರಾಯಲ್ಸ್ ತಂಡವು ಸಂಜು ಸ್ಯಾಮ್ಸನ್ ಅವರ ಬದಲಿಗೆ ರವೀಂದ್ರ ಜಡೇಜಾ ಅಥವಾ ಋತುರಾಜ್ ಗಾಯಕ್ವಾಡ್ ಅವರಂತಹ ಪ್ರಮುಖ ಅSಏ ಆಟಗಾರರನ್ನು ನೀಡುವಂತೆ ಕೇಳಿತ್ತು. ಆದರೆ, ಅSಏ ತಂಡವು ತಮ್ಮ ತಂಡದ ಪ್ರಮುಖ ಆಟಗಾರರನ್ನು ಬಿಟ್ಟುಕೊಡಲು
ಹಿಂಜರಿಯುತ್ತಿರುವುದರಿAದ ಈ ಪ್ರಕ್ರಿಯೆ ನಿಧಾನವಾಗುತ್ತಿದೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಸಿಎಸ್ ಕೆ ತಂಡವು ಈ ವದಂತಿಗಳಿಗೆ ಸ್ಪಷ್ಟನೆ ನೀಡಿದೆ. ಸಿಇಒ ಕಾಸಿ ವಿಶ್ವನಾಥನ್ ಅವರು ಈ ಸಾಮಾಜಿಕ ಜಾಲತಾಣದ ವದಂತಿಯ ಬಗ್ಗೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋದಲ್ಲಿ, ಸಂಜು ಸ್ಯಾಮ್ಸನ್ ಅವರ ವರ್ಗಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಉಲ್ಲೇಖಿಸುವ ತಮಿಳು- ಮಲಯಾಳಂ ಹಾಡಿನ ಸಾಲುಗಳಿವೆ. ಅಂತಿಮವಾಗಿ, ಕಾಸಿ ವಿಶ್ವನಾಥನ್ ಅವರು ಅಭಿಮಾನಿಗಳಿಗೆ ಮತ್ತು ತಂಡದ ಅನುಯಾಯಿಗಳಿಗೆ ಯಾವುದೇ ವರ್ಗಾವಣೆ ಒಪ್ಪಂದಗಳು CSK ಯಿಂದ ಅಧಿಕೃತವಾಗಿ ಘೋಷಣೆಯಾಗುವವರೆಗೆ ಅಂತಹ ವದಂತಿಗಳನ್ನು ನAಬದAತೆ ಮನವಿ ಮಾಡಿದ್ದಾರೆ.



