ಬೆಂಗಳೂರು: ಗ್ರಾಹಕರಲ್ಲಿ ಬಳಸಿದ ಕಾರುಗಳ ಕುರಿತು ಹೆಚ್ಚಿನ ಆಸಕ್ತಿಯನ್ನು ಮೂಡಿಸುತ್ತಿರುವ ಬಳಸಿದ ಕಾರ್ ರಿಟೇಲರ್ ಆಗಿರುವ ಸ್ಪಿನ್ನಿ ಸಂಸ್ಥೆ ಇತ್ತೀಚೆಗೆ ಬೆಂಗಳೂರು ಚೆಸ್ ಕ್ಲಬ್ ಮತ್ತು ಚೆಸ್.ಕಾಮ್ ಸಹಯೋಗದಲ್ಲಿ ಚೆಕ್ಮೇಟ್ ಪಾರ್ಕ್ ಎಂಬ ಉತ್ಸಾಹದಾಯಕ ಚೆಸ್ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯು ಬೆಂಗಳೂರಿನ ಸ್ಪಿನ್ನಿ ಪಾರ್ಕ್ನಲ್ಲಿ ನಡೆಯಿತು.
1000+ ಕಾರುಗಳು ಮತ್ತು ಪ್ರಶಾಂತವಾದ ಸರೋವರದ ಹಿನ್ನೆಲೆಯಲ್ಲಿ ನೆಲೆಗೊಂಡಿರುವ ಸ್ಪಿನ್ನಿ ಪಾರ್ಕ್ ಅಪೂರ್ವವಾದ ಚೆಸ್ ಪಂದ್ಯಾವಳಿಗೆ ಪರಿಪೂರ್ಣ ವೇದಿಕೆಯನ್ನು ಒದಗಿಸಿತ್ತು. ಹೆಸರಾಂತ ಚೆಸ್ ಹಬ್ಗಳ ಬೆಂಬಲದಲ್ಲಿ ನಡೆದ ಈ ಚೆಸ್ ಪಂದ್ಯಾವಳಿಯು ಕೌಶಲ್ಯ ಹೊಂದಿದ ಚೆಸ್ ಆಟಗಾರರಿಗೆ ಮರೆಯಲಾಗದ ಅನುಭವವನ್ನು ಒದಗಿಸಿತು.
ಅನುಭವಿ ಆಟಗಾರರಿಂದ ಹಿಡಿದು ಮಹತ್ವಾಕಾಂಕ್ಷಿ ಹೊಸ ಆಟಗಾರರವರೆಗೆ ಸರಿಸುಮಾರು 100 ಸ್ಪರ್ಧಿಗಳು ದಿನವಿಡೀ ನಡೆದ ಪಂದ್ಯಗಳಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮವು ಆಟಗಾರರಿಗೆ ಸ್ಪರ್ಧಿಸಲು ವೇದಿಕೆಯನ್ನು ಒದಗಿಸುವುದರ ಜೊತೆಗೆ ಬೆಂಗಳೂರಿನ ಚೆಸ್ ಉತ್ಸಾಹಿಗಳಲ್ಲಿ ಸಮುದಾಯ ಪ್ರಜ್ಞೆ ಮತ್ತು ಸೌಹಾರ್ದತೆ ಪ್ರಜ್ಞೆಯನ್ನು ದೃಢಗೊಳಿಸುವಂತೆ ಮಾಡಿತು.
ಬೆಂಗಳೂರು ಸಿಟಿ ಹೆಡ್ ಅಂಶುಮಾನ ಕಾರಂಗಿ, “ಚೆಸ್.ಕಾಮ್ ಮತ್ತು ಬೆಂಗಳೂರು ಚೆಸ್ ಕ್ಲಬ್ ಸಹಯೋಗದಲ್ಲಿ ಇಂತಹ ಅಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾವು ಸಂತೋಷ ಪಡುತ್ತಿದ್ದೇವೆ.ಈ ಪಂದ್ಯಾವಳಿಯಲ್ಲಿ ಭಾಗವಹಿಸಿದವರ ಅಗಾಧ ಪ್ರತಿಕ್ರಿಯೆಯು ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಚೆಸ್ ಉತ್ಸಾಹವನ್ನು ತೋರಿಸುತ್ತದೆ. ಪ್ರತಿ ನಗರದಲ್ಲಿ ಸ್ಪಿನ್ನಿ ಪಾರ್ಕ್ಗಳನ್ನು ಸಾಂಸ್ಕೃತಿಕ ಕೇಂದ್ರಗಳಾಗಿ ಪೋಷಿಸಲು ನಾವು ಬದ್ಧರಾಗಿದ್ದೇವೆ ಮತ್ತು ನಾವು ಬೆಂಗಳೂರಿನಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.