ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಯುತ ರಕ್ಷಾ ರಾಮಯ್ಯರವರನ್ನು ಅತ್ಯಧಿಕ ಮತಗಳಿಂದ ಚುನಾಯಿಸಲು ತಿರ್ಮಾನಿಸಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಛಲವಾದಿ ಮಹಾಸಭಾ ಘಟಕವು ಸಂಪೂರ್ಣ ಬೆಂಬಲ ಘೋಷಿಸಿದೆ ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮುಖಂಡ ನಿವೃತ್ತ ತಹಸೀಲ್ದಾರ್ ಸಿ.ಹನುಮಂತರಾಯ ತಿಳಿಸಿದರು.
ನಗರದ ಅರಿಶಿನಕುಂಟೆಯ ಖಾಸಗಿ ಹೋಟೆಲ್ ನಲ್ಲಿ ಚಲವಾದಿ ಸಮುದಾಯದ ಮುಖಂಡರಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕನಾಟಕ ರಾಜ್ಯ ಛಲವಾದಿ ಮಹಾಸಭಾ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು ಅದರಂತೆ ನೆಲಮಂಗಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯು ಸಹ ಅಸ್ತಿತ್ವದಲ್ಲಿರುತ್ತದೆ.ರಾಜ್ಯದಲ್ಲಿರುವ ಛಲ
ವಾದಿ ಜನಾಂಗದ ಶ್ರಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ.
ನಮ್ಮ ಸಮುದಾಯಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆ ಮರೆಯುವಂತಿಲ್ಲ ಶಾಸಕ ಎನ್. ಶ್ರೀನಿವಾಸ್ ಕ್ಷೇತ್ರದಲ್ಲಿ ಗೆಲುವು ಪಡೆದ ನಂತರ ನಮ್ಮ ಜನಾಂಗದ ಗ್ರಾಮಗಳ ಅಭಿವೃದ್ಧಿಗೆ ಕಾಳಜಿ ವಹಿಸಿದ್ದಾರೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ಗೆ ನಮ್ಮ ಸಮುದಾಯದಿಂದ ಹೆಚ್ಚಿನ ಬೆಂಬಲ ಕೊಡುವುದರ ಮೂಲಕ ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಹೋಬಳಿಗಳಾದ ನೆಲಮಂಗಲ ಕಸಬ, ತ್ಯಾಮಗೊಂಡ್ಲು, ಸೋಂಪುರ, ಮತ್ತು ಸೋಲೂರು ಹೋಬಳಿಗಳಲ್ಲಿರುವ ಪದಾಧಿಕಾರಿಗಳ ಜೊತೆ ಚರ್ಚಿಸಿ ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾನ್ಯ ಮಲ್ಲಿಕಾರ್ಜುನ ಖರ್ಗೆ ರವರ ಕೈ ಬಲಪಡಿಸಲು ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಎನ್. ಶ್ರೀನಿವಾಸ್ರವರ ಕಾರ್ಯ ಕ್ಷಮತೆ ಮತ್ತು ಅಭಿವೃದ್ಧಿಯ ಚಿಂತಕ ರವರ ಕೈ ಬಲಪಡಿಸಲು ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಯುತ ರಕ್ಷಾ ರಾಮಯ್ಯ ರವರನ್ನು ಅತ್ಯಧಿಕ ಮತಗಳಿಂದ ಚುನಾಯಿಸಲು ತಿರ್ಮಾನಿಸಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಛಲವಾದಿ ಮಹಾಸಭಾ ಘಟಕವು ಸಂಪೂರ್ಣ ಬೆಂಬಲ ಘೋಷಿಸಿದೆ ಎಂದರು.
ಶಾಸಕರಾದ ಎನ್. ಶ್ರೀನಿವಾಸ್ ರವರು ಏಪ್ರಿಲ್ 20ನೇ ತಾರೀಕು ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ನೆಲಮಂಗಲ ಪಟ್ಟಣದಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಿಷಿಷ್ಟ ಜಾತಿ ಮತ್ತು ಪರಿಷಿಷ್ಟ ಪಂಗಡದವರ ಸಮಾವೇಶವನ್ನು ಏರ್ಪಡಿಸಿದ್ದು ಸಮಾವೇಶಕ್ಕೆ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಛಲವಾದಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಗಂಗರಾಜು ರಾಯನ್ನಗರ, ಗಂಗಬೈರಪ್ಪ ರಾಯನ್ ನಗರ, ದೇವರಾಜು ಹವೇರಹಳ್ಳಿ,ನರಸಿಂಹಯ್ಯ ದೇವರ ಹೊಸಹಳ್ಳಿ, ರಾಮಾಂಜನೇಯ ಹಸುರವಳ್ಳಿ, ದೊಡ್ಡರಾಜು ತ್ಯಾಮಗೊಂಡ್ಲು, ದಂಡುವಯ್ಯ,ಮಂಜುಳ ತ್ಯಾಮ ಗೊಂಡ್ಲು, ಸಾವಿತ್ರಮ್ಮ ರಾಯನ್ ನಗರ, ಹಾಗೂ ಛಲವಾದಿ ಮುಖಂಡರು ಭಾಗಿಯಾಗಿದರು.