ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಗೆ ಭಾಜನವಾಗಿರುವ ಬೆನ್ನಲ್ಲೆ ಇದೀಗ ಹೆಚ್ಚು ದಿನಗಳ ಕಾಲ ರಾಜ್ಯವನ್ನಾಳಿದ ಕೀರ್ತಿಗೆ ಭಾಜನರಾಗಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಮೈಸೂರು ಜಿಲ್ಲೆಯವರಾಗಿದ್ದ ಹುಣಸೂರು ಕ್ಷೇತ್ರದ ಶಾಸಕರಾಗಿದ್ದ ಡಿ.ದೇವರಾಜು ಅರಸು ಅವರು ೭ ವರ್ಷ ೨೩೯ದಿನಗಳ ಕಾಲ ರಾಜ್ಯವನ್ನಾಳಿ ದಾಖಲೆ ಸ್ಥಾಪಿಸಿ ಕೀರ್ತಿಗೆ ಭಾಜನರಾಗಿದ್ದರು. ಇದೀಗ ಸಿದ್ದರಾಮಯ್ಯ ಅವರು ಇದೀಗ ೭ ವರ್ಷ ೨೪೦ ದಿನಗಳ ಕಾಲ ಅಧಿಕಾರ ನಡೆಸುವ ಮೂಲಕ ಹೊಸ ದಾಖಲೆ ಸೃಷ್ಠಿಸಿದ್ದಾರೆ.
ಅರಸು ಅವರ ದಾಖಲೆಯನ್ನು ಮುರಿಯುವ ಮೂಲಕ ಹೆಚ್ಚು ದಿನಗಳ ಕಾಲ ರಾಜ್ಯವನ್ನು ಆಳಿದ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೆಸರು ಪಡೆದರೆ, ಎರಡನೇ ಮುಖ್ಯಮಂತ್ರಿ ಎಂದು ಅರಸು ಅವರು ಪಡೆದರೆ, ಮೂರನೇ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ದಿನಗಳು ರಾಜ್ಯವನ್ನಾಳಿದ ಕೀರ್ತಿಗೆ ದಿವಂಗತ ಎಸ್.ನಿಜಲಿಂಗಪ್ಪ ಸೇರುತ್ತಾರೆ. ನಾಲ್ಕನೇ ಮುಖ್ಯಮಂತ್ರಿ ರಾಮಕೃಷ್ಣಹೆಗ್ಗಡೆ ಇದ್ದರೆ, ಐದನೇ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಇದ್ದಾರೆ.
ಒಟ್ಟಾರೆ ಸಿದ್ದರಾಮಯ್ಯ ಈಗಾಗಲೇ ಎರಡು ದಾಖಲೆ ಸ್ಥಾಪನೆ ಮಾಡಿದಂತಾಗಿದೆ. ಇದೀಗ ಅರಸು ದಾಖಲೆ ಮುರಿದು ಹೊಸ ದಾಖಲೆ ಸ್ಥಾಪಿಸಿರುವ ಸಿದ್ದರಾಮಯ್ಯ ಅವರ ಅಭಿಮಾನಿಗಳು ರಾಜ್ಯದ ಬಹುತೇಕ ಕಡೆ ಸಂಭ್ರಮಾಚರಣೆ ಮಾಡತೊಡದಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿ ಪಡೆ ಗ್ರಾಮದ ಲಕ್ಷಿ÷್ಮÃದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಯಾದಗಿರಿಯ ಸುಭಾಷ್ ವೃತ್ತದಲ್ಲೂ ಸಿದ್ದರಾಮಯ್ಯ ಅವರ ಅಭಿಮಾನಿ ಪಡೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಮೈಸೂರಿನಲ್ಲಿ ಸಿದ್ದರಾಮಯ್ಯವರು ನಿವಾಸದ ಮುಂದೆ ಅವರ ಅಭಿಮಾನಿಗಲು ನಾಟಿ ಕೋಳಿ ಬಿರಿಯಾನಿ ವಿತರಿಸುವ ಮೂಲಕ ಸಡಗರದಿಂದ ನಲಿದಾಡಿದ್ದಾರೆ.
ಇತ್ತ ನೆಲಮಂಗಲದ ಬಳಿ ಅಹಿಂದ ಪಡೆಯವರು ಸುಮಾರು ೬೦೦೦ ಜನಕ್ಕೆ ೨೦೦೦ ನಾಟಿ ಕೋಳಿ ಆಹಾರ ಸಿದ್ದಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಸಿದ್ದರಾಮಯ್ಯ ಅವರು ದಾಖಲೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ದೀರ್ಘಾವಧಿ ಸಿಎಂ, ಅರಸು ದಾಖಲೆ ಮುರಿದ ಮುಖ್ಯಮಂತ್ರಿ ಸಿದ್ದರಾಮಯ್ಯ: ಹೆಚ್ಚು ದಿನ ರಾಜ್ಯವನ್ನಾಳಿದ ಹೆಮ್ಮೆ



