ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಡಾ. ಕೆ.ಸುಧಾಕರ್ ಅವರು 8,22,619 ಮತಗಳನ್ನು ಪಡೆಯುವುದರ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಂ.ಎಸ್.ರಕ್ಷರಾಮಯ್ಯ ಅವರ ವಿರುದ್ಧ 1,63,460 ಮತಗಳ ಅಂತರದಿಂದ ಡಾ. ಕೆ. ಸುಧಾಕರ್ ಅವರು ಗೆಲುವು ಸಾಧಿಸಿದ್ದಾರೆ.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಂ.ಎಸ್. ರಕ್ಷರಾಮಯ್ಯ 6,59,159 ಮತಗಳನ್ನು ಪಡೆದಿದ್ದಾರೆ. ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಮಹದೇವ್ ಪಿ. 4,440, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಅಭ್ಯರ್ಥಿ ಮುನಿವೆಂಕಟಪ್ಪ ಎಂ.ಪಿ 4,557, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿ ಕಲಾವತಿ .ಎನ್ 2,744,
ದಿಗ್ವಿಜಯ ಭಾರತ ಪಾರ್ಟಿಯ ಅಭ್ಯರ್ಥಿ ನಾಗೇಶ್ .ಎಸ್ 850, ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ್ ಫುಲೆ) ಅಭ್ಯರ್ಥಿ ಟಿ.ಆರ್. ನಾರಾಯಣರಾವ್ 762, ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ವೆಂಕಟೇಶ್ ಮೂರ್ತಿ.ವಿ 2020, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಜಿ.ಸುಬ್ರಮಣಿಶೆಟ್ಟಿ 872 ಮತಗಳನ್ನು ಪಡೆದಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ಜಿ.ಎನ್. ಕೋದಂಡರೆಡ್ಡಿ 401, ಡಿ.ಚಿನ್ನಪ್ಪ 619, ಚಂದ್ರಶೇಖರ್ .ಹೆಚ್.ಸಿ 1,282, ದೇವರಾಜ್ ಕೊರೊನ ವಾರಿಯರ್ 1,177, ವಿ.ಎನ್. ನರಸಿಂಹಮೂರ್ತಿ ವಡಿಗೆರೆ 1,218, ನಸ್ರುಲ್ಲಾ 583, ಭಾಸ್ಕರ್ ಅಂಕಲಮಡಗು ಶಿವಾರೆಡ್ಡಿ 1,367, ಮೋಹಿತ್ ನರಸಿಂಹಮೂರ್ತಿ 1,229, ಜಿ.ಎನ್. ರವಿ 1,465, ರಾಜಣ್ಣ 3,764, ರಾಜಾರೆಡ್ಡಿ 3,381, ಡಾ. ಎಂ.ಆರ್ ರಂಗನಾಥ 857, ಸಿ.ವಿ. ಲೋಕೇಶ್ ಗೌಡ, ಬಿ.ಇ. 701, ವಲಸಪಲ್ಲಿ ಉತ್ತಪ್ಪ 2,162, ಟಿ.ವೆಂಕಟಶಿವುಡು 440, ಕೆ.ವೆಂಕಟೇಶ್ 474, ಜಿ.ಎನ್. ವೆಂಕಟೇಶ್ ಬಿ.ಎ., ಎಲ್.ಎಲ್.ಬಿ 1,207, ಸುಧಾಕರ್.ಎನ್ 1,591, ಡಿ. ಸುಧಾಕರ 1,689, ಸಂದೇಶ್ .ಜಿ ಅವರು 594 ಮತಗಳನ್ನು ಪಡೆದಿದ್ದಾರೆ. ನೋಟಾಗೆ 6,596 ಮತಗಳು ಚಲಾವಣೆಯಾಗಿವೆ.