ದೇವನಹಳ್ಳಿ: ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಮನೆ ಮನೆಗೂ ಭೇಟಿ ನೀಡಿ ಕೇಂದ್ರ ಸರ್ಕಾರದಿಂದ ಪಡೆದ ಫಲಾನುಭವಿಗಳ ಕುರಿತು ತಿಳಿಸಲಾಗುವುದು ಅದೇ ರೀತಿಯಲ್ಲಿ ಪಕ್ಷದ ಕಾರ್ಯಕರ್ತರು ಎಲ್ಲಾ ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳ ಕುರಿತು ಮನೆಗಳಿಗೆ ತಲುಪಿಸಬೇಕು ಎಂದು ಲೋಕಸಭಾ ಚುನಾವಣೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದರು.
ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಂಡಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಶಿಫಾರಸ್ಸು ಪಡೆಯಲು ರಾಜ್ಯಾಧ್ಯಕ್ಷರು ಕಾರ್ಯಾಲಯಕ್ಕೆ ಸಭೆ ಕರೆದು ಅಭಿಪ್ರಾಯಗಳನ್ನು ಪಡೆದು ಮಾಡಲಾಗುವುದು,
ಸುಧಾಕರ್ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಆದರೆ ಟಿಕೆಟ್ ದೊರೆಯುವುದು ಒಬ್ಬರಿಗೆ , ಪಕ್ಷದಲ್ಲಿ ಸಾಮರ್ಥ್ಯ ಮತ್ತು ಪ್ರಬಲವಾಗಿದ್ದವರಿಗೆ ವರಿಷ್ಠರು ಗುರುತಿಸಿ ನೀಡಲಿದ್ದಾರೆ, ಅದರ ಕುರಿತು ಯಾವುದೇ ಭಿನ್ನಾಭಿಪ್ರಾಯವಿಲ್ಲ ನಮಗೆ ಯಾರೇ ಅಭ್ಯರ್ಥಿಯಾಗಲಿ ನಮ್ಮ ಜವಾಬ್ದಾರಿ ನಾವು ಪ್ರಾಮಾಣಿಕವಾಗಿ ನಿರ್ವಹಿಸಲಿದ್ದೇವೆ ಎಂದರು.
ಮಾಜಿ ಸಚಿವ ಡಾ. ಸುಧಾಕರ್ ಮಾತನಾಡಿನಮ್ಮ ಹಿಂಬಾಲಕರು ಅಭಿಮಾನಿಗಳಿಗೆ ಹುಮ್ಮಸ್ಸು ತುಂಬಲು ಆತ್ಮವಿಶ್ವಾಸದ ಮಾತುಗಳನಾಡಿದ್ದೇವೆ ಅದನ್ನು ಅನ್ಯತಾ ಭಾವನೆ ಮೂಡಿಸು ವುದು ಬೇಡ ಹಾಗಾಗಿ ನನಗೆ ಟಾರ್ಗೆಟ್ ಮಾಡುವುದು ಹೊಸದಲ್ಲ ಇದನೆಲ್ಲಾ ಎದುರಿಸುವ ಶಕ್ತಿ ನನ್ನಲ್ಲಿದೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಧೀರ್ಘ ಕಾಲವಾಗಿ ಮುಂದುವರೆಯುವುದು, ಎತ್ತಿನಹೊಳೆ ಯೋಜನೆಯಲ್ಲಿ ಹೆಚ್ಚಿನ ಅನುದಾನಗಳು ನೀಡಿರುವುದು ಬೆಜೆಪಿ ಆಡಳಿತದಲ್ಲಿದ್ದಾಗ ಮಾತ್ರ ಒದಗಿಸಲಾಗಿದೆ,ನಾವು ಮುಂದಿನ ದಿನಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಮಾಡುವ ಉದ್ದೇಶಕ್ಕಾಗಿ ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬರುವುದು ಬಹುಮುಖ್ಯ ಎಂದರು.
ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಮಾತನಾಡಿ ಭಾರತೀಯ ಜನತಾ ಪಾರ್ಟಿ ನಾಯಕರಲ್ಲಿ ಕಾರ್ಯಕರ್ತನ ಮನವಿ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಸಭೆ ಮಾಡಬೇಕು, ಹಳ್ಳಿಗಳಲ್ಲಿ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಇಂದೇ ಎಚ್ಚೆತುಕೊಂಡು ಪಕ್ಷದ ಸಂಘಟನೆಗೆ ಕಾರ್ಯಯೋನ್ಮುಖರಾಗುವುದು ಸೂಕ್ತ ಸಮಯವಿದು ಎಂದರು.
ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣ ಮಾತನಾಡಿ ಇದೇ ತಿಂಗಳು 29 ರೊಂದು ದೇವನಹಳ್ಳಿ ಟೌನ್ ನಲ್ಲಿರುವ ಪಿಳ್ಳಪ್ಪ ಕಾಂಪ್ಲೆಕ್ಸ್ ನಲ್ಲಿ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನೆ ನಡೆಯಲಿದೆ ಹಾಗೂ ಮಾರ್ಚ್ 3 ಕ್ಕೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರುಗಳ ರ್ಯಾಲಿ ನಡೆಯಲಿದ್ದು, ತಾಲೂಕಿನ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಬೇಕು ಎಂದು ತಿಳಿಸಿದರು.
ದೇವನಹಳ್ಳಿ ಮಂಡಲದ ಶ್ಯಾನಪನಹಳ್ಳಿ ಭೂತ್ ಸಮಿತಿ ಸಭೆ, ವಿಶ್ವನಾಥಪುರದಲ್ಲಿ ಪಕ್ಷದ ಗೋಡೆ ಬರಹಗಳ ಮೂಲಕ ಪ್ರಚಾರ ಮಾಡಲಾಯಿತು ನಂತರ ದೇವನಹಳ್ಳಿ ಟೌನ್ ನಲ್ಲಿ ಪಕ್ಷದ ಕಾರ್ಯಕರ್ತರ ಕಾರ್ಯಗಾರ ಸಭೆಯನ್ನು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಸಹ ಪ್ರಭಾರಿ ಜಿ.ಎನ್.ವೇಣುಗೋಪಾಲ್, ಮಾಜಿ ಜಿಲ್ಲಾಧ್ಯಕ್ಷ ಎ. ವಿ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಚ್. ಎಂ ರವಿಕುಮಾರ್, ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಸಂಚಾಲಕ ಅಂಬರೀಶ್ ಗೌಡ, ತಾಲೂಕು ಅಧ್ಯಕ್ಷ ಸುನೀಲ್, ಮಾಧ್ಯಮ ಸಂಚಾಲಕ ರಮೇಶ್ ಮುಖಂಡರಾದ ದೇಸು ನಾಗರಾಜ್ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮತ್ತಿತರರು ಇದ್ದರು.