ತಿ.ನರಸೀಪುರ: ಗ್ರಾಪಂನಿಂದ ಶಾಲೆಗಳಿಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯ ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ ತಿಳಿಸಿದರು.ತಾಲ್ಲೂಕಿನ ಶಂಭುದೇವನಪುರ ಗ್ರಾಮದಲ್ಲಿ ಟಿ.ದೊಡ್ಡಪುರ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ಗ್ರಾಮ ಸಭೆಯನ್ನು ನಡೆಸಲಾಯಿತು.
ಸಭೆ ಉದ್ದೇಶಿಸಿ ಮಾತನಾಡಿದ ಅವರು ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಒಮ್ಮೊಮ್ಮೆ ಶಾಲೆಗೆ ಭೇಟಿ ನೀಡಿ ನಿಮ್ಮ ಮಕ್ಕಳ ಕಲಿಕೆ ಮತ್ತು ಹಾಜರಾತಿಯ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಎಂದರು.ಮುಂದುವರಿದು ಮಾತಾಡಿದವರು ಮಕ್ಕಳು ಶಾಲೆಯಿಂದ ಮನೆಗೆ ಬಂದ ನಂತರ ಶಿಕ್ಷಕರು ಶಾಲೆಯಲ್ಲಿ ಹೇಳಿಕೊಟ್ಟ ಪಾಠ ಮತ್ತು ಮನೆ ಕೆಲಸವನ್ನು (ಹೋಮ ವರ್ಕ್ ) ಮಾಡುವಂತೆ ತಿಳಿ ಹೇಳಬೇಕು. ಆಗ ಕಲಿಕೆ ಬಗ್ಗೆ ಮಕ್ಕಳಿಗೆ ಆಸಕ್ತಿ ಹೆಚ್ಚಾಗುತ್ತದೆ ಎಂದರು.
ಶಿಕ್ಷಕರು ಸಹ ಪಾಠ ಮತ್ತು ಪಠ್ಯೇತರ ಚಟುವಟಿಗಳಿಗೆ ಗಮನ ನೀಡಬೇಕು.ಆವಾಗ ಮಕ್ಕಳಮಾನಸಿಕ ದೈಹಿಕ ಬೆಳವಣಿಗೆ ಅಗಲಿದೆ.ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಇರುವ ಶಾಲೆಗಳ ಅಭಿವೃದ್ಧಿಯನ್ನು ಅನುಧಾನಕ್ಕೆ ಅನುಸಾರವಾಗಿ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿಪಡಿಸುತ್ತೇನೆ ಎಂದರು.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಕೆ.ಜಿ. ದಯಾನಂದ ಮಾತನಾಡಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಅನು ಧಾನದ ಜೊತೆಗೆ ಸ್ಥಳೀಯ ಸಂಪನ್ಮೂಲ ಸೇರಿದಾಗ ಮಾತ್ರ ಶಾಲೆಗಳು ಅಭಿವೃದ್ಧಿ ಸಾಧ್ಯವಾಗಲಿದ್ದು. ಶಾಲಾ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಹಾಗೂ ಎಸ್ಟಿಎಂಸಿ ಕಮಿಟಿ ಜೊತೆ ಸೇರಿ ಗ್ರಾಮದಲ್ಲಿರುವ ದಾನಿಗಳನ್ನು ಸಂಪರ್ಕಿಸಿ ಅವರಿಂದ ಸಹಾಯ ಪಡೆದು ಅಭಿವೃದ್ಧಿಪಡಿಸಬಹುದು ಎಂದರು.
ಈ ಸಂದರ್ಭದಲ್ಲಿ ಉಸ್ತುವಾರಿ ಅಧಿಕಾರಿ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಲಿಂಗರಾಜು ಉಪಾಧ್ಯಕ್ಷೆ ಮಂಜುಳಾ ಸದಸ್ಯರುಗಳಾದ ಆರ್ ಮದೇಶ್, ಜೈ ಬಸವಣ್ಣ, ಪ್ರತಾಪ್, ಚಿಕ್ಕತಾಯಮ್ಮ, ಬಸಮ್ಮಣಿ, ಶಿಕ್ಷಕರಾದ ನಾಗೇಂದ್ರ ರಾಜೇಂದ್ರ ಪ್ರಸಾದ್, ಬಿಲ್ ಕಲೆಕ್ಟರ್, ಸಂಕೇಶ್, ಕಂಪ್ಯೂಟರ್ ಆಪರೇಟರ್ ಮಹದೇವಯ್ಯ. ವಾಟರ್ ಮ್ಯಾನ್ ಗಳು ಶಾಲೆ ಮಕ್ಕಳು ಸಾರ್ವಜನಿಕರು.ಹಾಜರಿದ್ದರು.