ದೇವನಹಳ್ಳಿ: ಕೆಮ್ಮು, ಕಫಾ ಇತ್ತು ಎಂದು ಆಸ್ವತ್ರೆಗೆ ಬಂದಿದ್ದ ಮಗು ಮೃತಪಟ್ಟಿದ್ದು ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಮೂರು ದಿನದ ಹಿಂದೆ ಚೆನ್ನಾಗಿ ಓಡಾಡ್ತಿದ್ದ ಬೆಂಗಳೂರು ಗ್ರಾ. ಜಿಲ್ಲೆ ವಿಜಯಪುರ ನಗರದ ದಾದಾಪೀರ್ ಮತ್ತು ನಜಿಯಾ ಬಾನು ದಂಪತಿಯ ಮಗಳಾದ 6 ವರ್ಷದ ರಾಬಿಯಾ ಎಂಬ ಮಗುವಿಗೆ ಕೆಮ್ಮು, ಕಫಾ ಕಾಣಿಸಿಕೊಂಡಿತ್ತು.ಹೀಗಾಗಿ ಚಿಕಿತ್ಸೆಗೆಂದು ಮಗುವನ್ನು ದೇವನಹಳ್ಳಿಯ ಆಕಾಶ್ ಆಸ್ವತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಈಗ ಮಗು ಮೃತಪಟ್ಟಿದ್ದು ವೈದ್ಯರ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಮಗುವಿಗೆ ಮೂರು ದಿನದಿಂದ ಜನರಲ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಿದ್ದು ಸಂಜೆ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುಗೆ ಶಿಫ್ಟ್ ಮಾಡಿದ ಮೂರು ಗಂಟೆಗಳಲ್ಲಿ ಮಗು ಮೃತಪಟ್ಟಿದೆ. ರಿಸರ್ಚ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ ಕಾರಣ ಸಾವು ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಆಸ್ವತ್ರೆ ವೈದ್ಯರು ಸಿಬ್ಬಂದಿ ವಿರುದ್ದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಮಗು ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
Leave a Review