ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಶಿವರಾಮಕಾರಂತರ ಕೃತಿ `ಚೋಮನದುಡಿ’ ಚಿತ್ರವಾಗಿ ಮೂಡಿಬಂದು ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತ್ತು. ಕಟ್ ಮಾಡಿದರೆ ಬರೋಬ್ಬರಿ ಐವತ್ತು ವರ್ಷಗಳ ನಂತರ ಇದೇ ಸಿನಿಮಾ ನೆನಪಿಸುವ ಬಿಚ್ಚುಗತ್ತಿಯ ಬಂಟನ ಬಲ್ಲರೇನ ಚಿತ್ರವೊಂದು ತೆರೆಗೆ ಬರಲು ಅಣಿಯಾಗಿದೆ. `ದುಡಿಯ ಸದ್ದಿಗೆ ಕ್ರಾಂತಿಯ ಎದ್ದಿದೆ’
ಎಂಬ ತೂಕದ ಅಡಿಬರಹ ಇರಲಿದೆ. ದೋರಸಮುದ್ರ ಪಿಕ್ಚರಸ್ ಬ್ಯಾನರ್ ಅಡಿಯಲ್ಲಿ ಅನಿಲ್ ದೋರಸಮುದ್ರ ನಿರ್ದೇಶನ ಹಾಗೂ ಬಂಡವಾಳ ಹೂಡಿದ್ದಾರೆ. ಸಹೋದರ ನವೀನ್ ಸಿಂಬಾವಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಪ್ರಚಾರದ ಕೊನೆ ಹಂತವಾಗಿ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಎಸ್ಆರ್ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. `ಚೋಮನದುಡಿ’ ಚಿತ್ರದಲ್ಲಿ ಅಭಿನಯಿಸಿದ್ದ ಹಿರಿಯನಟ ಸುಂದರ್ರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಕಾಳನಾಗಿ ಚೆಲುವರಾಜ್ಗೌಡ, ಬಾಸುಮ ಕೊಡಗು,
ಸ್ವೀಡಲ್ ಡಿಸೋಜಾ, ಶೈಲೇಶ್ ಕೆಂಗೇರಿ, ತಾರಾನಾಥ ಬೋಳಾರ್, ಪುಣ್ಯಕೊಟ್ಯಾನ್, ಗೋಪಾಲ್ ಮೂಲ್ಯ ಮುಂತಾದವರು ಅಭಿನಯಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕ ರಾಘವಸೂರ್ಯ, ಪ್ರದ್ಯಮ್ನ ನರಹಳ್ಳಿ- ದೀಪಕ್ ಕೋಟ್ಯಾನ್ ಸಾಹಿತ್ಯಕ್ಕೆ ಶ್ರೀಶಾಸ್ತ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಲ್ಯಾಮರಿಂಜ್ ನಿರ್ಮಲ್, ಸಂಕಲನ ಅನಿಲ್.ಡಿ-ಮಾವಿನ್ ಜೋಯಿಲ್ ಪಿಂಟೋ ಅವರದಾಗಿದೆ. ಕಾರ್ಕಳ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಅಂದಹಾಗೆ ಸಿನಿಮಾವು ಇದೇ ತಿಂಗಳು ಜನರಿಗೆ ತೋರಿಸಲು ಸಜ್ಜಾಗಿದೆ. ಶಕರು ಹೇಳುವಂತೆ `ಒಂದಾನೊಂದು ಕಾಲದಲ್ಲಿ’ ಬರುವ ಹಾಡಿನ ಸಾಲು ಸೌಂಡಿಂಗ್ ಆಗಿರುವುದರಿಂದ ಅದನ್ನೆ ಶೀರ್ಷಿಕೆಯಾಗಿ ಬಳಸಲಾಗಿದೆ. ನಮ್ಮ ಸಿನಿಮಾವು ಚೋಮನದುಡಿಯ ಮುಂದುವರಿದ ಭಾಗ ಎನ್ನಬಹುದು. ಮಂದಗಾಮಿ ಚೋಮ ಹೋರಾಟ ಮಾಡಿದರೂ ಭೂಮಿ ಸಿಗುವುದಿಲ್ಲ. ಆತನ ಮಗ ಕಾಳ ನ್ಯಾಯಕ್ಕಾಗಿ ತೀವ್ರಗಾಮಿಯಾಗಿ ಬಿಚ್ಚುಗತ್ತಿಯನ್ನು ಉಪಯೋಗಿಸಿದಾಗ ಏನಾಗುತ್ತದೆ. ಅಂತಿಮವಾಗಿ ಅಪ್ಪನ ಆಸೆಯನ್ನು ಕಾಳ ಮತ್ತು ಬೆಳ್ಳಿ ಈಡೇರಿಸಿಕೊಳ್ಳುತ್ತಾರಾ ಎಂಬುದನ್ನು ಕಮರ್ಷಿಯಲ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರವನ್ನು ಕಾರಂತ ಟ್ರಸ್ಟ್ನವರು ನೋಡಿ ಆರ್ಶಿವರಿಸಿದ್ದಾರೆ. ಭಾವಗಳ ತೀವ್ರತೆಯನ್ನು ಅಚ್ಚುಕಟ್ಟಾಗಿ ಸೆರೆಹಿಡಿಯಲಾಗಿದೆ. ಚೋಮನ ಪಾತ್ರ ಶೇಕಡ ಇಪ್ಪತ್ತರಷ್ಟು ಬರುತ್ತದೆಂದು ಅನಿಲ್ ದೊರಸಮುದ್ರ ಮಾಹಿತಿ ನೀಡಿದರು.



