ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಲಾಗಿದ್ದ ಟಿ೨೦ ಕ್ರಿಕೆಟ್ ಲೀಗ್ನ ಆಯೋಜಕರು ಶ್ರೀನಗರದಿಂದ ಮಧ್ಯರಾತ್ರಿ ಪರಾರಿಯಾದ ನಂತರ, ಲೀಗ್ ಸಂಪೂರ್ಣವಾಗಿ ರದ್ದಾಗಿದೆ. ಇತ್ತ
ಹೋಟೆಲ್ಗಳ ಬಿಲ್ಗಳನ್ನು ಪಾವತಿಸದೆ, ಆಟಗಾರರು ಹಾಗೂ ಸಿಬ್ಬಂದಿಯನ್ನು ಗೊAದಲದಲ್ಲಿ ಬಿಟ್ಟು ಆಯೋಜಕರು ಕಣ್ಮರೆಯಾಗಿದ್ದಾರೆ. ಕ್ರಿಸ್ ಗೇಲ್, ಮಾರ್ಟಿನ್ ಗಪ್ಟಿಲ್, ಜೆಸ್ಸಿ ರೈಡರ್ ಮತ್ತು ತಿಸಾರಾ ಪರೆರಾ ಅವರಂತಹ ಅAತಾರಾಷ್ಟಿçÃಯ ತಾರೆಯರು ಭಾಗವಹಿಸಿದ್ದ ‘ಇಂಡಿಯನ್ ಹೆವನ್ ಪ್ರೀಮಿಯರ್ ಲೀಗ್’ (ಐಎಚ್ಪಿಎಲ್) ಈಗ ಸ್ಥಗಿತಗೊಂಡಿದ್ದು, ಬಕ್ಷಿ ಕ್ರೀಡಾಂಗಣ ಖಾಲಿಯಾಗಿದೆ. ಸುಮಾರು ೪೦ ಆಟಗಾರರು ಹಣವೂ ಇಲ್ಲದೆ, ಮುಂದೇನು ಎಂಬ ಸ್ಪಷ್ಟತೆಯೂ ಇಲ್ಲದೆ ಸಿಕ್ಕಿಹಾಕಿಕೊಂಡಿದ್ದಾರೆ. “ಆಯೋಜಕರು ಹೋಟೆಲ್ನಿಂದ
ಓಡಿಹೋಗಿದ್ದಾರೆ.  ಅವರು ಹೋಟೆಲ್, ಆಟಗಾರರು ಅಥವಾ ಅಂಪೈರ್ಗಳಿಗೆ ಹಣ ಪಾವತಿಸಿಲ್ಲ. ಆಟಗಾರರು ತಮ್ಮ ಮನೆಗಳಿಗೆ ಮರಳಲು ಅನುಕೂಲವಾಗುವಂತೆ ನಾವು ಹೋಟೆಲ್ನೊಂದಿಗೆ ಒಪ್ಪಂದ ಮಾಡಿಕೊAಡಿದ್ದೇವೆ,” ಎಂದು ಇಂಗ್ಲಿಷ್ ಅAಪೈರ್ ಮೆಲಿಸಾ ಜುನಿಪರ್ ಹೇಳಿದ್ದಾರೆ.
ಮೊದಲ ದಿನದಿಂದಲೇ ಸಮಸ್ಯೆ:
ಈ ಟೂರ್ನಿಯು ಮೊದಲ ದಿನದಿಂದಲೇ ಸಮಸ್ಯೆಗಳಿAದ ಕೂಡಿತ್ತು ಎಂದು ದೇಶೀಯ ಆಟಗಾರರೊಬ್ಬರು ಹೇಳಿದ್ದಾರೆ. “ಅಂತಾರಾಷ್ಟಿçÃಯ ಕ್ರಿಕೆಟಿಗರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅಪರೂಪದ ಅವಕಾಶವನ್ನು ಅವರು ನಮಗೆ ನೀಡಿದ್ದರು. ಆದರೆ ಪ್ರಾಯೋಜಕರು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಂತೆ ತೋರುತ್ತದೆ. ಪ್ರೇಕ್ಷಕರ ಕೊರತೆಯಿಂದಾಗಿ ಅವರ ಬಳಿ ಹಣ ಖಾಲಿಯಾಯಿತು. ಮೊದಲ ದಿನ ಸಮವಸ್ತçಗಳೂ ಇರಲಿಲ್ಲ, ಸ್ಥಳೀಯವಾಗಿ ಖರೀದಿಸಲಾಯಿತು. ಯಾವುದೇ ಆಟಗಾರರೊಂದಿಗೆ ಒಪ್ಪಂದಕ್ಕೂ ಸಹಿ ಹಾಕಿರಲಿಲ್ಲ,” ಎಂದು ಅವರು ವಿವರಿಸಿದರು. ಭಾನುವಾರ ಆಟಗಾರರು ಎಚ್ಚರಗೊಳ್ಳುವಷ್ಟರಲ್ಲಿ, ಆಯೋಜಕರು ನಾಪತ್ತೆಯಾಗಿದ್ದರು. ಪ್ರಮುಖ ಆಯೋಜಕರ ಫೋನ್ಗಳು ಸ್ವಿಚ್ ಆಫ್ ಆಗಿವೆ. ಸದ್ಯಕ್ಕೆ, ಖಾಲಿ ಕ್ರೀಡಾಂಗಣ, ಪಾವತಿಯಾಗದ ಬಿಲ್ಗಳು ಮತ್ತು ನಿರಾಸೆಯಿಂದ ಮನೆಗೆ ಮರಳುತ್ತಿರುವ ಕ್ರಿಕೆಟಿಗರು ಮಾತ್ರ ಉಳಿದಿದ್ದಾರೆ.


		
		
		
		