ಯಲಹಂಕ: ಸಿನಿಮಾ ಶೈಲಿಯಲ್ಲಿ ಜುವೆಲ್ಲರಿ ಶಾಪ್ ಗೆ ನುಗ್ಗಿದ ಮೂವರು ದರೋಡೆಕೋರರು ಜ್ಯುವೆಲರಿ ಶಾಪ್ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಂಬರಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ರಾತ್ರಿ 9:15 ರ ಸುಮಾರಿಗೆ ಲಕ್ಷ್ಮಿಪುರ ರಸ್ತೆಯಲ್ಲಿರೋ ಪದಮ್ ಎಂಬುವರಿಗೆ ಸೇರಿದ ಪದಮ್ ಪೊಜ್ಯುವೆಲ್ಲರಿ ಶಾಪಿಗೆನುಗ್ಗಿದ ಮೂವರು ದರೋಡೆಕೋರರು ಕೆಲವೇ ನಿಮಿಷಗಳಲ್ಲಿ 55 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆರೋಪಿಗಳು ಮುಖ ಕಾಣದಂತೆ ತಲೆಗೆ ಹೆಲ್ಮೆಟ್ ಹಾಗೂ…ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು ಮೇಲ್ನೋಟಕ್ಕೆ ಇವರು ಅಪರಾಧ ಕೃತ್ಯಗಳಲ್ಲಿ ಪಳಗಿರುವವರಂತೆ ಗೋಚರಿಸುತ್ತಿದೆ.
ದರೋಡೆ ಕೋರರು ಪರಾರಿಯಾಗುತ್ತಿದ್ದಂತೆ ಜ್ಯುವೆಲರಿ ಶಾಪ್ ನ ಮಾಲಿಕ ಮಾದನಾಯಕನಹಳ್ಳಿ ಲೀಸ್ ಠಾಣೆಗೆ ದೂರು ದಾಖಲಿಸಿದ್ದು ದೂರು ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮುರಳಿಧರ್ ನೇತೃತ್ವದಲ್ಲಿ ಧರಡೆಕೋರರಿಗೆ ಬಲೆ ಬೀಸಲಾಗಿದೆ.ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ.