ಶಿಡ್ಲಘಟ್ಟ: “ ಬಿತ್ತಿದಂತೆ ಬೆಳೆ”, “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?” ಎಂಬ ನಾಣ್ಣುಡಿಗಳು ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕ .ಈ ದಿಸೆಯಲ್ಲಿ ಶಾಲಾಮಕ್ಕಳಿಗೆ ಪೋಲೀಸ್ ಠಾಣೆಯಲ್ಲಿನ ಕರ್ತವ್ಯ,ಶಿಸ್ತು ತೋರಿಸಿ ತಿಳುವಳಿಕೆ ನೀಡುವ ಸಭೆ ಆಯೋಜಿಸಿತ್ತು.ಬಿಜಿಎಸ್ ಶಾಲೆಗಳ ಪ್ರಾಥಮಿಕ ಶಾಲಾ ಮಕ್ಕಳು ಪೋಲೀಸ್ ಠಾಣೆಗೆ ಬಂದಾಗ ಸರ್ಕಲ್ ಇನ್ಸೆ÷್ಪಕ್ಟರ್ ಎಂ.ಶ್ರೀನಿವಾಸ್ ಅವರು ಶಾಲಾ ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯುವ ಮೂಲಕ ಪೋಲೀಸ್ ಎಂದರೆ ಭಯ ಬೇಡ, ಕರ್ತವ್ಯವೆಂದು ತಿಳಿಹೇಳಿದರು.
ಮಕ್ಕಳಿಗೆ ಠಾಣೆಯ ಕಾರ್ಯವೈಖರಿ ಮತ್ತು ಬಂದೂಕು, ಸೆಂಟ್ರಿ, ಅಧಿಕಾರಿ,ಹಾಗೂ ದೂರುಗಳ ಸ್ವೀಕರಣೆ ಬಗ್ಗೆ ಮಾಹಿತಿ ನೀಡಿದರು.
ಮಕ್ಕಳು ಮನೆಯಲ್ಲಿ ತಂದೆ- ತಾಯಿ ಮತ್ತು ಹಿರಿಯರಿಗೆ ಗೌರವ ನೀಡಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳಾಗಿ ಶಿಕ್ಷಕರನ್ನು ಗೌರವ, ಭಕ್ತಿಯಿಂದ ನೇಮಿಸಬೇಕು. ಸಮಾಜದಲ್ಲಿ ಶಾಂತಿ ನೆಮ್ಮದಿ ಮತ್ತು ಸಂತೋಷದಿAದ ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು. ಸುಳ್ಳು ಹೇಳಬಾರದು.ಕಳವು ಮಾಡಬಾರದು.ಚಾಡಿ ಹೇಳಬಾರದು. ಬಾಲ್ಯದಿಂದಲೂ ಓದಿನಲ್ಲಿ ಮುಂದೆ ಇರಬೇಕು ಎಂದು ತಿಳಿಸಿದರು.
ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಬೇಕು. ನೀವು ಹಿರಿಯರಿಗೆ ಮನವರಿಕೆ ಮಾಡಿಕೊಡುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ಸಮುದಾಯದ ಆಸ್ತಿ ಯಾಗಬೇಕು ಎಂದು ಹೇಳಿದರು. ನಿಮ್ಮ ಜೀವನದಲ್ಲಿ ಗುರಿಯನ್ನು ಸಾಧಿಸಲು ಓದಬೇಕು.ಶಿಕ್ಷಕರಾಗಿ, ಪೋಲೀಸ್ ಅಧಿಕಾರಿಯಾಗಿ, ತಹಸೀಲ್ದಾರ್, ಜಿಲ್ಲಾಧಿಕಾರಿಯಾಗಿ, ಪೋಲೀಸ್ ಅಧಿಕಾರಿಗಳಾಗುವ ಕನಸು ಕಾಣಬೇಕು ಎಂದು ಸರ್ಕಲ್ ಇನ್ಸೆ÷್ಪಕ್ಟರ್ ಶ್ರೀನಿವಾಸ್ ಉತ್ಸಾಹ ತುಂಬಿದರು.
ಈ ಸಂದರ್ಭದಲ್ಲಿ ಬಿಜಿಎಸ್ ಶಾಲೆಯ ಶಿಕ್ಷಕಿಯರು ಸೇರಿದಂತೆ ಪೋಲೀಸ್ ಮುಖ್ಯ ಪೇದೆ, ಆನಂದ್, ಎಎಸ್ಐ ಶ್ರೀನಿವಾಸ್ ಹೆಡ್ ಕಾನ್ಸೆ÷್ಟÃಬಲ್ ಬಸಪ್ಪ, ಪ್ರವೀಣ್ ಜಮುನಾ ರಾಜೇಂದ್ರ ಸರ್ದಾರ್ ಹಾಗೂ ಬಾಬಾ ಜಾನ್ ಉಪಸ್ಥಿತರಿದ್ದರು.