ಕುಣಿಗಲ್: ಜಮೀನು ವಿವಾದ ಸಂಬಂಧ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ದಂಪತಿ ಮೇಲೆ ದೋಣ್ಣೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ತಿಪ್ಪನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಘಟನೆಯಲ್ಲಿ ತಿಪ್ಪನಾಯಕನಹಳ್ಳಿ ಗ್ರಾಮದ ರಂಗಸ್ವಾಮಿ (50) ಆತನ ಹೆಂಡತಿ ಲೀಲಾವತಿ (44) ಗಾಯಗೊಂಡ ವ್ಯಕ್ತಿಗಳುಏನಿದು ಘಟನೆ : ತಿಪ್ಪನಾಯಕನಹಳ್ಳಿ ಗ್ರಾಮದ ಸರ್ವೆ ನಂ 41/5, 41/6 ರ ಜಮೀನಿಗೆ ಸಂಬಂಧಿಸಿದಂತೆ ರಂಗಸ್ವಾಮಿ ಮತ್ತು ಮುದ್ದರಂಗಾಚಾರ್ ಅವರ ಮಕ್ಕಳ ನಡುವೆ ವಿವಾದ ಇದ್ದು, ಪ್ರಕರಣವು ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಹೀಗಿದ್ದರು ದಿನೇಶ್, ಬಾಲರಾಜು ಅವರು ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಜಮೀನಲ್ಲಿ ಬೆಳೆದಿದ್ದ, ಗಿಡಿಗಳನ್ನು ಕೀಳಿಸಿ, ಜಮೀನನ್ನು ಉಳಿಮೆ ಮಾಡಲು ಮುಂದಾಗಿದ್ದರು ಎನ್ನಲಾಗಿದ್ದು, ಈ ಸಂಬಂಧ ರಂಗಸ್ವಾಮಿ ಮೇ 19 ರಂದು ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದರು, ಪೊಲೀಸರು ಎರಡು ಕಡೆಯವರನ್ನು ಠಾಣೆಗೆ ಕರೆಸಿ, ಜಮೀನು ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಇದು ಇತ್ಯಾರ್ಥವಾಗುವ ವರೆಗೂ ಯಾರು ಸಹಾ ಜಮೀನು ಬಳಿಗೆ ಹೋಗದಂತೆ ತಾಕೀತು ಪಡಿಸಿ ಎರಡು ಕಡೆಯವರಿಗೆ ಬುದ್ದಿವಾದ ಹೇಳಿ ಕಳುಹಿಸಿದರು.
ದಂಪತಿಗಳ ಮೇಲೆ ಹಲ್ಲೆ : ಮೇ 27 ಸೋಮವಾರ ಮುದ್ದರಂಗಚಾರ್ ಆತನ ಹೆಂಡತಿ ಸರಸಮ್ಮ ಮಕ್ಕಳಾದ ದಿನೇಶ್, ಬಾಲರಾಜ್, ಅಳಿಯ ವೆಂಕಟೇಶ್ ಅವರು ಜಮೀನಿನಲ್ಲಿ ಉಳುಮೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಈ ವಿಚಾರ ತಿಳಿದ ರಂಗಸ್ವಾಮಿ, ಜಮೀನು ಬಳಿ ಹೋಗಿ ಪ್ರಕರಣ ನ್ಯಾಯಾಲಯದಲ್ಲಿ ಇದೆ ಮತ್ತೆ ಉಳುಮೆ ಮಾಡುತ್ತಿದ್ದೀರ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದ್ದು ಈ ನಡುವೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ, ಬಳಿಕ ದಿನೇಶ್, ಬಾಲರಾಜು ಅವರು ರಂಗಸ್ವಾಮಿ ಮೇಲೆ ದೋಣ್ಣೆಯಿಂದ ಹಲ್ಲೆ ನಡೆಸಿದ್ದಾರೆ, ನನ್ನ ಗಂಡನ ಮೇಲೆ ಹಲ್ಲೆ ಮಾಡಬೇಡಿ ಎಂದು ಜಗಳ ಬಿಡಿಸಲು ಬಂದ ರಂಗಸ್ವಾಮಿಯ ಹೆಂಡತಿ ಲೀಲಾವತಿ ಮತ್ತು ಆತನ ಮಗನ ಮೇಲೂ ಸಹಾ ವೆಂಕಟೇಶ್, ಬಾಲರಾಜ್, ಸರಸಮ್ಮ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ರಂಗಸ್ವಾಮಿ ಆರೋಪಿಸಿದ್ದಾರೆ,ಇಬ್ಬರ ಬಂಧನ : ಘಟನೆಗೆ ಸಂಬಂಧಿಸಿದಂತೆ ನಾಲ್ವರ ಮೇಲೆ ಪ್ರಕರಣ ದಾಖಲಾಗಿದ್ದು ದಿನೇಶ್ ಹಾಗೂ ಬಾಲರಾಜ ಅವರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.