ಹೆಸರಿನಲ್ಲೇ ಆಕರ್ಷಣೆ ತರಿಸುವ `ಕ್ಲಾಸ್ ಆಫ್ ಮೈಸೂರು’ ಚಿತ್ರದ ಮುಹೂರ್ತ ಮತ್ತು ಶೀರ್ಷಿಕೆ ಅನಾವರಣ ಸಮಾರಂಭವು ಶ್ರೀ ಬಂಡೆ ಮಹಾಂಕಾಳಿ ಅಮ್ಮನ ಸನ್ನಿದಿಯಲ್ಲಿ ಅದ್ದೂರಿಯಾಗಿ ನಡೆದಿತ್ತು. `ಯಥಾಭವ’ ನಿರ್ಮಿಸಿ, ಆಕ್ಷನ್ ಕಟ್ ಹೇಳಿದ್ದ ಗೌತಂ ಬಸವರಾಜು ಈ ಚಿತ್ರದ ಮೂಲಕ ಮತ್ತೋಂದು ವಿಭಿನ್ನ ಅನುಭವ ನೀಡಲು ಸಜ್ಜಾಗಿದ್ದು, ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ಮಾಕ್ಟ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಇವರೊಂದಿಗೆ ವಿಜಯೇಂದ್ರ ಸೂರ್ಯವಂಶಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಬಹಳ ನಿರೀಕ್ಷೆಯಲ್ಲಿರುವ `ಕ್ಲಾಸ್ ಆಫ್ ಮೈಸೂರು’ ಮೊದಲ ಹಂತದ ಚಿತ್ರೀಕರಣವು ಗೋವಾ ಮತ್ತು ಗೋಕರ್ಣ ಸುಂದರ ತಾಣಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ರಂಗಾಯಣ ರಘು, ದತ್ತಣ್ಣ, ಶರತ್ ಲೋಹಿತಾಶ್ವ, ಮಹಾಂತೇಶ್, ತಬಲನಾಣಿ, ಬಿರಾದಾರ್ ಮುಂತಾದವರು ಬಿಸಿಲಿನ ತಾಪವನ್ನು ಲೆಕ್ಕಿಸದೆ ದೃಶ್ಯಗಳಲ್ಲಿ ಪಾಲ್ಗೋಂಡಿದ್ದರು. ಚಿತ್ರವು ಸಂಸ್ಕೃತಿ ಮತ್ತು ಭಾವನೆಗಳನ್ನು ಒಳಗೊಂಡ ಕಥೆಯನ್ನು ಹೇಳಲಿದೆ.
ತಾರಾಗಣದಲ್ಲಿ ತಾರಾ, ಜಗ್ಗಪ್ಪ ಅಲ್ಲದೆ ಹಿರಿಯ ಹಾಗೂ ಅನುಭವಿ ಕಲಾವಿದರ ಸಮಾಗಮವಾಗಿದೆ. ಅಲ್ಲದೆ ವಿಜಿಯೇಂದ್ರ ಸೂರ್ಯವಂಶಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೋ ಕೋಸ್ಟಾ ಸಂಗೀತ, ಎಸ್.ಕೆ.ರಾವ್ ಛಾಯಾಗ್ರಹಣ, ನಾಗಾರ್ಜುನ ಶರ್ಮ ಸಾಹಿತ್ಯ, ಮಾಸ್ತಿ ಸಂಭಾಷಣೆ, ಕಲೆ ಉಲ್ಲಾಸ್ ಹೈದರ್ ಅವರದಾಗಿದೆ. ಎರಡನೇ ಹಂತದ ಶೂಟಿಂಗ್ನ್ನು ಏಪ್ರಿಲ್ ತಿಂಗಳಲ್ಲಿ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.
ಸ್ಟಾರ್ ಕಾಸ್ಟ್ ಜತೆ `ಕ್ಲಾಸ್ ಆಫ್ ಮೈಸೂರು’ ಶೂಟಿಂಗ್ ಮೊದಲ ಹಂತ ಕಂಪ್ಲೀಟ್



