This is the title of the web page
This is the title of the web page

ಸ್ವಚ್ಛತಾ ಅಭಿಯಾನ ಆಯೋಜಿಸಿದ ಆ್ಯಕ್ಸಿಸ್ ಬ್ಯಾಂಕ್

ಬೆಂಗಳೂರು: `ವಿಶ್ವ ಪರಿಸರ ದಿನ 2023’ರ ಅಂಗವಾಗಿ, ಭಾರತದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್‍ಗಳಲ್ಲಿ ಒಂದಾಗಿರುವ ಆ್ಯಕ್ಸಿಸ್ ಬ್ಯಾಂಕ್, ನಗರದ ಪುಟ್ಟೇನಹಳ್ಳಿ ಕೆರೆ ಮತ್ತು ಸೌಲ್ ಕೆರೆಯಲ್ಲಿ `ಕ್ಲೀನ್-ಎ-ಥಾನ್’ ಹೆಸರಿನ ಸ್ವಚ್ಛತಾ ಅಭಿಯಾನ ಆಯೋಜಿಸಿತ್ತು.

ಈ ಉಪಕ್ರಮವು 25ಕ್ಕೂ ಹೆಚ್ಚು ಕಡಲದಂಡೆಗಳು ಮತ್ತು ಜಲಮೂಲಗಳನ್ನು ಸ್ವಚ್ಛಗೊಳಿಸುವ ಬ್ಯಾಂಕ್‍ನ ರಾಷ್ಟ್ರವ್ಯಾಪಿ ಅಭಿಯಾನದ ಒಂದು ಭಾಗವಾಗಿದೆ. ಪ್ಲಾಸ್ಟಿಕ್ ಮಾಲಿನ್ಯ ಎದುರಿಸುವ ತುರ್ತು ಅಗತ್ಯ ಮತ್ತು ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಪ್ರವೃತ್ತಿಗಳನ್ನು ಉತ್ತೇಜಿಸಲು ಅಂದಾಜು 100ಕ್ಕೂ ಹೆಚ್ಚು ಸ್ವಯಂಸೇವಕರು ಈ ಅಭಿಯಾನದಲ್ಲಿ ಭಾಗಿಯಾಗಿದ್ದರು.

ಪುಟ್ಟೇನಹಳ್ಳಿ ಕೆರೆಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಡಿಎಫ್‍ಆರ್‍ಒ ಶಿವರಾಜ್ ಅವರು ಉಪಸ್ಥಿತರಿದ್ದರು. ಸೌಲ್ ಕೆರೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಪ್ಸಾಸ್ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಸುಬ್ರಮಣ್ಯಂ ಶಂಕರನ್ ಅವರು ಸ್ವಯಂಸೇವಕರನ್ನು ಪ್ರೋತ್ಸಾಹಿಸಿದರು.

ಈ ಉಪಕ್ರಮದ ಕುರಿತು ಮಾತನಾಡಿದ ಆ್ಯಕ್ಸಿಸ್ ಬ್ಯಾಂಕ್‍ನ ಶಾಖೆ ಬ್ಯಾಂಕಿಂಗ್, ರಿಟೇಲ್ ಹೊಣೆಗಾರಿಕೆ ಮತ್ತು ಉತ್ಪನ್ನದ ಸಮೂಹ ಕಾರ್ಯನಿರ್ವಾಹಕ ರವಿ ನಾರಾಯಣನ್ ಅವರು, ನಮ್ಮ ಭೂಮಿಯನ್ನು ಮಾಲಿನ್ಯದಿಂದ ರಕ್ಷಿಸುವ ಜವಾಬ್ದಾರಿ ನಮ್ಮಲ್ಲಿ ಪ್ರತಿಯೊಬ್ಬರ ಮೇಲೆ ಇದೆ ಎಂಬುದನ್ನು ನಾವು ದೃಢವಾಗಿ ನಂಬುತ್ತೇವೆ. ಈ ಉಪಕ್ರಮದ ಮೂಲಕ ಸಹ ನಾಗರಿಕರಲ್ಲಿ ಪರಿಸರ ಪ್ರಜ್ಞೆ ಮತ್ತು ಜವಾಬ್ದಾರಿಯ ಪ್ರಜ್ಞೆ ಹುಟ್ಟುಹಾಕುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.