ಬೆಂಗಳೂರು: ಈಗಾಗಲೇ ಜಯನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಪಾದಚಾರಿ ರಸ್ತೆಗಳ ಅತಿಕ್ರಮಣ ಮಾಡಿ ವ್ಯಾಪಾರ ನಡೆಸುತ್ತಿದ್ದ, ವ್ಯಾಪಾರಸ್ಥರನ್ನು ತೆರವುಗೊಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು ಬನಶಂಕರಿಯಲ್ಲಿ ಪಾದಚಾರಿ ರಸ್ತೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವರನನ್ನುತೆರವುಗೊಳಿಸಲು ಮುಂದಾಗಿದ್ದಾರೆ.
ಮೂರು ಟ್ರ್ಯಾಕ್ಟರ್ಗಳೊಂದಿಗೆ ತೆರಳಿದ ಬಿಬಿಎಂಪಿ ಅಧಿಕಾರಿ ಸಿಬ್ಬಂದಿಗಳು ಪಾದಚಾರಿ ರಸ್ತೆ ಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವರನ್ನು ಅಲ್ಲಿಂದ ತೆರವುಗೊಳಸಿದ್ದಾರೆ.
ಏಕಾಏಕಿ ತಮ್ಮನ್ನು ವಹಿವಾಟು ಮಾಡಲು ಬಿಡದೆ ತೆರವುಗೊಳಿಸಿದ ಬಿಬಿಎಂಪಿಕಾರ್ಯಚರಣೆ ವಿರುದ್ಧ ಅಂಗಡಿಗಳವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.