ಸಂಗೀತ ನಿರ್ದೇಶಕ ರವಿ ಬಸ್ರೂರ್ ಪುತ್ರ ಮಾಸ್ಟರ್ ಪವನ್ ಬಸ್ರೂರು ನಾಯಕನಾಗಿ ಅಭಿನಯಿಸಿರುವ ಕ್ಲಿಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ವಿಶೇಷವೆಂದರೆ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ದೊಡ್ಡ ಪರದೆಯಲ್ಲಿ ಕ್ಲಿಕ್ ಟ್ರೇಲರ್ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ವಿದೇಶದ ಬಿಗ್ ಸ್ಕ್ರೀನ್ ಮೂಲಕ ಅನಾವರಣಗೊಂಡ ಟ್ರೇಲರ್ ಎಂಬುದು ಕ್ಲಿಕ್ ಚಿತ್ರದ ಹೆಚ್ಚುಗಾರಿಕೆ.
ಹಾಗೆಯೇ ಬೆಂಗಳೂರಿನಲ್ಲಿ ಟ್ರೇಲರ್ ಕಾರ್ಯಕ್ರಮ ನಡೆಯಿತು. ಕ್ಷೇತ್ರಪತಿ, ಸಲಾರ್ ಖ್ಯಾತಿಯ ನಟ ನವೀನ್ ಶಂಕರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಮಾತನಾದಿದ ಅವರು, ಮಕ್ಕಳಲ್ಲಿರುವ ಟ್ಯಾಲೆಂಟ್ ಪೋಷಕರು ಗುರುತಿಸಬೇಕೆಂದು ಇದರಲ್ಲಿ ತೋರಿಸಿದ್ದಾರೆ. ಮೊದಲ ಬಾರಿ ನೋಡುತ್ತಲೇ ಇಷ್ಟವಾಗುವ ಟ್ರೇಲರ್ ಎಂದರು.
ಮತ್ತೊಬ್ಬ ಅತಿಥಿ, ಕ್ಲಾಂತ ನಾಯಕ ವಿಘ್ನೇಶ್ ಮಾತನಾಡಿ ಚಿತ್ರದಲ್ಲಿ ಒಳ್ಳೇ ಮೆಸೇಜ್ ಇದೆ. ಮಕ್ಕಳ ಮನಸ್ಥಿತಿ ಬಗ್ಗೆ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು.ಗಿರ್ಮಿಟ್ ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದ ಪವನ್, ಕ್ಲಿಕ್ ಚಿತ್ರದಲ್ಲಿ ಲೀಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಲ್ಲಿಲಲ್ಲಿ ಆನಂದ್ ಮಾತನಾಡುತ್ತ ತಮ್ಮ ಮಕ್ಕಳು ಹಾಳಾಗಬಾರದು, ಹಾಗಾಗಬೇಕು, ಹೀಗಾಗಬೇಕು ಅಂತ ಹೇಳ್ತಾರೇ ವಿನಃ ಅವರಲ್ಲಿ ಯಾವ ಟ್ಯಾಲೆಂಟ್ ಇದೆ ಅಂತ ಗುರುತಿಸುವ ಪ್ರಯತ್ನವನ್ನು ಯಾರೂ ಮಾಡಲ್ಲ. ನಾನೂ ಅಂಥಾ ಒಬ್ಬ ತಂದೆಯಾಗಿ ನಟಿಸಿದ್ದೇನೆ. ಒಳ್ಳೆ ಸಬ್ಜೆಕ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದರು.
ನಟಿ ಚಂದ್ರಕಲಾ ಮೋಹನ್ ಮಾತನಾಡಿ ಜೀವನದಲ್ಲಿ ನಾವು ಯಾವ ಕೆಲಸ ಮಾಡ್ತೀವೋ ಅದರಲ್ಲಿ ಕ್ಲಿಕ್ ಆಗಬೇಕು. ನಮ್ಮ ಆಸೆಗಿಂತಲೂ ಮಕ್ಕಳ ಮನದಲ್ಲೇನಿದೆ, ಅವರಿಗೆ ಯಾವುದರಲ್ಲಿ ಆಸಕ್ತಿ ಇದೆ ಅಂತ ಗುಋತಿಸಿ ಅದನ್ನು ಪ್ರೋತ್ಸಾಹಿಸಿದರೆ ಅವರು ಸಾಧನೆ ಮಾಡ್ತಾರೆಂಬುದು ಚಿತ್ರದಲ್ಲಿದೆ ಎಂದರು.
ನಿರ್ಮಾಪಕ ಶಶಿಕಿರಣ್ ಮಾತನಾಡಿ ಗಿರ್ಮಿಟ್ ಸಿನಿಮಾದಲ್ಲಿ ಪವನ್ ಅಭಿನಯ ನೋಡಿ ಆತನೇ ನಮ್ಮ ಕಥೆಗೆ ಹೀರೋ ಅಂತ ಸೆಲೆಕ್ಟ್ ಮಾಡಿಕೊಂಡೆವು. ಆನಂದ್ ಸುಮನಾ ಶಶಿ ಆತನ ತಂದೆ ತಾಯಿ ಅಗಿದ್ದಾರೆ. ಚಿತ್ರವೀಗ ರಿಲೀಸ್ ಹಂತಕ್ಕೆ ಬಂದಿದೆ ಎಂದರು.
ಶಶಿಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ವಿಶ್ವಾಸ್ ಕೌಶಿಕ್ ಸಂಗೀತ ನೀಡಿದ್ದಾರೆ. ಆಕಾಶ್ ಪರ್ವ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಜೀವನ್ ಗೌಡ ಅವರ ಛಾಯಾಗ್ರಹಣ, ವಿನಯ್ ಕುಮಾರ್ ಅವರ ಸಂಕಲನವಿದೆ.
ಟೆಕ್ಕಿ ಶಶಿಕಿರಣ್ ಅವರು ಶರಣ್ಯ ಫಿಲಂಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದು ವರುಣ್ ರಾಘವೇಂದ್ರ ಕೋ ಪ್ರೊಡ್ಯೂಸರ್ ಆಗಿ ಕೈಜೋಡಿಸಿದ್ದಾರೆ. ಮಾ.ಪವನ್ ಜೊತೆ ಮಾ.ಕಾರ್ತಿಕ್ ಅಲ್ಲದೆ ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ.