ಬೆಂಗಳೂರು: ಕೂದಲಿನ ಮರು ಬೆಳವಣಿಗೆ ಮತ್ತು ಚರ್ಮ ಚಿಕಿತ್ಸೆಯಲ್ಲಿ ಮುಂಚೂಣಿ ಸಂಸ್ಥೆಯಾಗಿರುವ ಅಡ್ವಾನ್ಸ್ಡ್ ಗ್ರೋಹೈರ್ & ಗ್ಲೋಸ್ಕಿನ್ ಕ್ಲಿನಿಕ್ ಜಯನಗರದಲ್ಲಿ 2023ರ ನವೆಂಬರ್ 10ರಂದು ಶುಭಾರಂಭಗೊಂಡಿತು. ಸಂಸ್ಥೆಯು ಈ ಮಾಹಿತಿಯನ್ನು ಘೋಷಿಸಿದೆ. ಈ ಮಹತ್ವದ ಸಂದರ್ಭವು ಸ್ವಾಸ್ಥ್ಯ ಸೇವೆಗಳಿಗಾಗಿ ನಿರಂತರವಾಗಿ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಅಸಾಧಾರಣ ಸೇವೆ, ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಕೂದಲಿನ ಮರು ಬೆಳವಣಿಗೆಗೆ ಅಗತ್ಯ ಪರಿಹಾರಗಳನ್ನು ಒದಗಿಸಲು ಸಮರ್ಪಿತವಾಗಿರುವ ಅಡ್ವಾನ್ಸ್ಡ್ ಗ್ರೋಹೈರ್ & ಗ್ಲೋಸ್ಕಿನ್ ಸಂಸ್ಥೆಯು, ಕ್ಲಿನಿಕಲ್ ಮತ್ತು ಕ್ಲಿನಿಕಲ್ ಅಲ್ಲದ ವಿಧಾನಗಳನ್ನು ಒಳಗೊಂಡಿರುವ ಸಮಗ್ರ ಚಿಕಿತ್ಸೆಗಳನ್ನು ಗ್ರಾಹಕರಿಗೆ ಒದಗಿಸುತ್ತದೆ.
ಈ ಚಿಕಿತ್ಸೆಗಳಲ್ಲಿ ಪರ್ಕ್ಯುಟೇನಿಯಸ್ ಎಫ್ಯುಇ ಹೇರ್ ಟ್ರಾನ್ಸ್ಪ್ಲಾಂಟ್, ಪಿಆರ್ಪಿ ಪ್ರೊ ಪ್ಲಸ್, ಲೇಸರ್ ಹೇರ್ ಥೆರಪಿ, ಕಾಸ್ಮೆಟಿಕ್ ಸಿಸ್ಟಮ್ ಮತ್ತಿತತರ ಸೇವೆಗಳು ಸೇರಿಕೊಂಡಿವೆ. ಇವೆಲ್ಲವೂ ಅಮೆರಿಕದ ಎಫ್ಡಿಎಯಿಂದ ಮಾನ್ಯತೆಯನ್ನು ಹೊಂದಿವೆ.
ಉದ್ಘಾಟನಾ ಸಮಾರಂಭವು ಒಂದು ಮಹತ್ವದ ಕಾರ್ಯಕ್ರಮದಂತೆ ನಡೆಯಿತು. ಅಡ್ವಾನ್ಸ್ಡ್ ಗ್ರೋಹೈರ್ & ಗ್ಲೋಸ್ಕಿನ್ ಕ್ಲಿನಿಕ್ನ ಬ್ರಾಂಡ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶರಣ್ ವೆಲ್ ಜೆ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಫ್ರ್ಯಾಂಚೈಸ್ ಮಾಲೀಕರು ಮತ್ತು ಕ್ಲಿನಿಕ್ನ ನುರಿತ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಜಯನಗರದಲ್ಲಿನ ಅಡ್ವಾನ್ಸ್ಡ್ ಗ್ರೋಹೈರ್ & ಗ್ಲೋಸ್ಕಿನ್ ಕ್ಲಿನಿಕ್. ಕೂದಲಿನಮರು ಬೆಳವಣಿಗೆ ಮತ್ತು ಚರ್ಮದ ಚಿಕಿತ್ಸೆಯಲ್ಲಿ ಉತ್ಕೃಷ್ಟತೆಯನ್ನು ಬಯಸುವ ವ್ಯಕ್ತಿಗಳಿಗೆ ಸೇವೆಗಾಗಿ ತೆರೆದಿದೆ. ಹೊಸ ಸಂಸ್ಥೆಯಲ್ಲಿ ಸ್ವಾಸ್ಥ್ಯದ ಭವಿಷ್ಯವನ್ನು ಗ್ರಾಹಕರು ಅನುಭವಿಸುವುದರೊಂದಿಗೆ ಉದ್ಯಮದಲ್ಲಿ ನಮ್ಮ ಸಂಸ್ಥೆಯನ್ನು ಬೆಳೆಯುವಂತೆ ಮಾಡಿದ ಪರಿವರ್ತನೆಯನ್ನು ಕಂಡುಕೊಳ್ಳಬಹುದು.