ಜನವರಿ 30ರಂದ 10 ಗಂಟೆಗೆ ಸಂತ ತ್ಯಾಗರಾಜರಿಂದ ರಚಿಸಲ್ಪಟ್ಟ ಪಂಚ ರತ್ನ ಕೃತಿ ಗೋಷ್ಠಿ ಗಾಯನವು ಪ್ರತಿಷ್ಠಿತ ಶಾಸ್ತ್ರೀಯ ಸಂಗೀತಗಾರರು ಒಕ್ಕೊರಲಿನಿಂದ ಹಾಡಿದರು.
ಈ ಕಾರ್ಯಕ್ರಮದಲ್ಲಿ 600 ಕ್ಕಿಂತ ಹೆಚ್ಚು ಸಂಗೀತಗಾರರು ಭಾಗವಹಿಸಿದ್ದರು.ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜರಿಗೆ `ಭಾರತಿ ತ್ಯಾಗರಾಜ ಸಮ್ಮಾನ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಯು 1 ಲಕ್ಷ ರೂ.ಗಳ ನಗದು. ಒಂದು ಚಿನ್ನದ ಪದಕ, ಒಂದು ಉಲ್ಲೇಖ, ಮತ್ತು ಇತರ ಸಾಮಗ್ರಿಗಳನ್ನು ಒಳಗೊಂಡಿರುತ್ತದೆ.
ಇದುವರಗೆ 32 ಸಂಗೀತಗಾರರು ಮತ್ತು ಸಂಬಂಧಿತ ವಿಷಯಗಳಲ್ಲಿ ಪರಿಣತರಿಗೆ ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ಸದ್ಗುರು ಶ್ರೀ ತ್ಯಾಗಬ್ಬ್ರಹ್ಮ ಕೈಂಕರ್ಯ ಟ್ರಸ್ಟ್ ನೀಡಿ ಗೌರವಿಸಲಿದೆ. ಪ್ರಶಸ್ತಿಗಳನ್ನು 30 ಜನವರಿ 2024 ರಂದು ಸಂಜೆ 6 ಗಂಟೆಗೆ ಪದ್ಮಶ್ರೀ ಪುರಸ್ಕೃತ ಡಾ. ವಿ.ಆರ್. ಗೌರಿಶಂಕರ್ ಪ್ರದಾನ ಮಾಡಲಿದ್ದಾರೆ.