ನಾಯಕ ನಟರಾಗಿ ಚಲನಚಿತ್ರ ನಿರ್ಮಾಪಕರಾಗಿ ಚಿತ್ರೋದ್ಯಮ ಮತ್ತು ಪ್ರೇಕ್ಷಕರಿಗೆ ಪರಿಚಯವಿದ್ದ ರಘುವೀರ್ ರವರುತಮ್ಮ ಸಂಗೀತ ಪ್ರತಿಭೆ ಅನಾವರಣಕ್ಕೆ ಆಯ್ಕೆ ಮಾಡಿಕೊಂಡ ಚಿತ್ರ ಮೋಡ ಕವಿದ ಮಂಜು.
ನಟ ರಘುವೀರ್ ಪ್ರಥಮ ಬಾರಿಗೆ ಸಂಗೀತ ಸಂಯೋಜನೆ ಮಾಡಿರುವ ಚಿತ್ರವಿದು. ಎಂ. ಸಿ.ಡಕ್ಷನ್ಸ್ ಮತ್ತು ಹ್ಯಾಟ್ರಿಕ್ ಪ್ರೊಡಕ್ಷನ್ಸ್ ನಂ 1 ಅರ್ಪಿಸುವ ” ಮೋಡ ಕವಿದ ಮಂಜು ” ಚಿತ್ರದ ಹಾಡುಗಳನ್ನು ರಘುವೀರ ಸಿದ್ಧಪಡಿಸಿದಇತ್ತೀಚಿಗೆ ರಘುವೀರ್ ಅವರ ಶಿಷ್ಯ. ಹ್ಯಾಟ್ರಿಕ್ ಸೂರ್ಯ ಪಿ. ಎನ್,ರವರು ಹಾಡುಗಳನ್ನು ಹುಡುಕಿ ಲಹರಿ ಆಡಿಯೋ ಕಂಪನಿಯ ಮಾಲೀಕರಾದ ಲಹರಿ ವೇಲು ರವರಿಗೆ ಒಪ್ಪಿಸಿದ್ದರು.ಲಹರಿ ಕಂಪನಿ ಜೊತೆ ಒಪ್ಪಂದ ಕೂಡಾ ಮಾಡಿಕೊಂಡಿದ್ದರು.
ಸೂರ್ಯ ರವರ ಪ್ರಯತ್ನ ಮತ್ತು ಲಹರಿ ವೇಲು ರವರ ಪ್ರೋತ್ಸಾಹ ದಿಂದಾಗಿ ಮೋಡ ಕವಿದ ಮಂಜು ಚಿತ್ರದ ಹಾಡುಗಳು ಲಹರಿ ಆಡಿಯೋ ಕಂಪನಿಬಿಡುಗಡೆ ಮಾಡಿತು.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿ.ಜಿ ಅವರು ಬರೆದಿರುವ ಹಾಡುಗಳನ್ನು ರಘುವೀರ್, ರಮೇಶ್ಚಂದ್ರ, ನಂದಿತಾ, ರಾಜೇಶ್ ಕೃಷ್ಣನ್ ಹಾಗೂ ಚೇತನ್ ಹಾಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು..ಲಹರಿ ವೇಲು ನಿರ್ದೇಶಕ ರಾಘವ ಲೋಕಿ, ನೀಲಕಂಠ ಅಡಿಗ, ಗಾಯಕ ರಮೇಶ್ ಚಂದ್ರ, ಯೋಧ ಎ. ವಿಜಯ್ ಕುಮಾರ್ ರೆಡ್ಡಿ, ಪಾಲ್ಗೊಂಡರು.