This is the title of the web page
This is the title of the web page

ಸಿಎಂ ಬೊಮ್ಮಾಯಿ ರೋಡ್ ಶೋ

ತಿ.ನರಸೀಪುರ: ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತ್ತು ತಿ.ನರಸೀಪುರದಲ್ಲಿ ಡಾ.ರೇವಣ್ಣ ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಬಿಜೆಪಿ ಪಕ್ಷದ ರೋಡ್ ಶೋ ನಲ್ಲಿ ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ವರುಣಾ ಕ್ಷೇತ್ರ ಬಿಜೆಪಿ ಮಯವಾಗಿದೆ.ಸೋಮಣ್ಣ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ವರುಣಾ ಮತದಾರ ಸನ್ನದ್ಧರಾಗಿದ್ದಾರೆ.ಸೋಮಣ್ಣ ಕ್ಷೇತ್ರವನ್ನು ಗೆಲ್ಲಲು ಬೆಳಿಗ್ಗೆ 5ರಿಂದ ರಾತ್ರಿ 10 ಗಂಟೆವರೆಗೆ ಅವಿರತ ಶ್ರಮವಹಿಸುತ್ತಿದ್ದಾರೆ.ಕ್ಷೇತ್ರದಲ್ಲಿ ಬದಲಾವಣೆ ಉದ್ದೇಶಕ್ಕಾಗಿ ಸೋಮಣ್ಣ ಸ್ಪರ್ಧಿಸುತ್ತಿದ್ದು, ಗೋವಿಂದರಾಜ ನಗರದಿಂದ ವರುಣಾ ಮತ್ತು ಚಾಮರಾಜನಗರಕ್ಕೆ ಬಂದಿದ್ದಾರೆ.ಅವರು ಕ್ಷೇತ್ರಕ್ಕೆ ಬಂದ ಮೇಲೆ ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಿದೆ ಎಂಬುದು ಬೆಳಕಿಗೆ ಬಂದಿದೆ.

ಹಾಗಾಗಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಗೆಲುವಿನ ಜೊತೆ ಕ್ಷೇತ್ರದ ಅಭಿವೃದ್ಧಿ ಆರಂಭಗೊಳ್ಳಲಿದೆ. ಅಲ್ಲದೆ ವರುಣಾವನ್ನು ತಾಲೂಕು ಕೇಂದ್ರವಾಗಿ ಮಾಡಲಾಗುವುದು ಎಂಬ ಭರವಸೆ ನೀಡಿದರು.ತಿ.ನರಸೀಪುರದ ಅಭ್ಯರ್ಥಿ ಡಾ.ರೇವಣ್ಣ ಕೂಡ ಗೆಲುವಿನ ನಗೆ ಬೀರಲಿದ್ದು, ಅವರು ಕೊರೊನ ಅವಧಿಯಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ.ಮನೆ ಮನೆ ಬಾಗಿಲಿಗೆ ಬಂದು ಅರೋಗ್ಯ ವಿಚಾರಿಸಿದ್ದಾರೆ.

ಕ್ಷೇತ್ರಕ್ಕೆ ರೇವಣ್ಣ ಬೇಕಾ ಅಥವ ತಮ್ಮ ಮನೆ ಬಾಗಿಲಿಗೆ ಕರೆಸಿಕೊಂಡು ದರ್ಬಾರ್ ಮಾಡುವ ಅಭ್ಯರ್ಥಿಗಳು ಬೇಕಾ ಎಂದು ಪ್ರಶ್ನಿಸಿದರು.ಕ್ಷೇತ್ರಕ್ಕೆ ದುರಾಹಂಕರಿ ರಾಜಕರಾಣಿ ಬೇಕಿಲ್ಲ ,ಸರಳ ಸಜ್ಜನ ಹಾಗೂ ಜನಾನುರಾಗಿ ರೇವಣ್ಣ ಗೆಲ್ಲಬೇಕು ಎಂದರು.
ಜಿಲ್ಲೆಯಲ್ಲಿ ರಾಜಕೀಯ ಜಡ್ಡುಗಟ್ಟಿದೆ ,ಹಿಂದಿನ ಅವಧಿಗಳಲ್ಲಿ ವರುಣಾ ಮತ್ತು ತಿ. ನರಸೀಪುರ ಕ್ಷೇತ್ರಗಳನ್ನು ಪ್ರತಿನಿಧಿಸಿರುವ ವ್ಯಕ್ತಿಗಳು ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.ಉಜ್ವಲ ಭಾರತ ಭವಿಷ್ಯಕ್ಕಾಗಿ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು.

ಇಂದು ವಿಶ್ವ ಆರ್ಥಿಕ ಬಲಾಢ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನಪಡೆದಿದೆ.ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ದಿಟ್ಟ ನಿರ್ಧಾರಗಳು ದೇಶವನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದರು. ಸಂದರ್ಭದಲ್ಲಿ, ಸಂಸದ ಶ್ರೀನಿವಾಸ ಪ್ರಸಾದ್, ವರುಣಾ ಅಭ್ಯರ್ಥಿ ವಿ. ಸೋಮಣ್ಣ,ಚಲನಚಿತ್ರ ನಟ ಶಶಿಕುಮಾರ್, ತಿ. ನರಸೀಪುರ ಕ್ಷೇತ್ರದ ಅಭ್ಯರ್ಥಿ ಡಾ. ಎಂ. ರೇವಣ್ಣ,ಕ್ಷೇತ್ರ ಅಧ್ಯಕ್ಷ ಲೋಕೇಶ್ ಇತರರು ಹಾಜರಿದ್ದರು.