ಮೈಸೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಸರ್ಕಾರಎಫ್ಐಅರ್ ದಾಖಲಿಸಿ ಅವರ ಯಾತ್ರೆಗೆ ಅಡಚಣೆ ಉಂಟು ಮಾಡುತ್ತಿದೆ ಅಂತ ಖಂಡಿಸಿದರು.
ವ್ಯಕ್ತಿಯೊಬ್ಬ ತಪ್ಪು ಮಾಡಿದಾಗ, ಭಾರತೀಯ ನ್ಯಾಯ ಸಂಹಿತೆಯನ್ನು ಉಲ್ಲಂಘಿಸಿದಾಗ ಅಥವಾ ಭಾರತದ ಸಂವಿಧಾನವನ್ನು ಉಲ್ಲಂಘಿಸಿದಾಗ ಎಫ್ಐಅರ್ ದಾಖಲಿಸುತ್ತಾರೆ.
ಎಂದು ಹೇಳಿದ ಸಿದ್ದರಾಮಯ್ಯ, ಯಾವುದೇ ಪ್ರಮಾದವೆಸಗದ ರಾಹುಲ್ ಗಾಂಧಿಯವರ ವಿರುದ್ಧ ಅಸ್ಸಾಂ ಸರ್ಕಾರ ವಿನಾಕಾರಣ ಮತ್ತು ಉದ್ದೇಶಪೂರ್ವಕವಾಗಿ ಎಫ್ಐಅರ್ ದಾಖಲಿಸಿದೆ ಎಂದರು. ರಾಹುಲ್ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ತಡೆಯಬೇಕು ಅದಕ್ಕೆ ಅಡ್ಡಿಯನ್ನುಂಟು ಮಾಡಬೇಕು