ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂಬಧ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಪಕ್ಷದ ವರಿಷ್ಠರು ದೆಹಲಿಗೆ ಕರೆಸುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ವರಿಷ್ಠರ ಕರೆಗಾಗಿ ನಿರೀಕ್ಷೆಯಲಿದ್ದಾರೆ.
ನಾವು ಕರೆದಾಗ ದೆಹಲಿಗೆ ಬಂದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ರಾಹುಲ್ಗಾಂಧಿಯನ್ನು ಭೇಟಿ ಮಾಡಲು ಪಕ್ಷದ ಪ್ರಮುಖರಾಗಿರುವ ಕೆ.ಸಿ.ವೇಣುಗೋಪಾಲ್ ಅವರ ಸಂದೇಶದ ನಿರೀಕ್ಷೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ಗಾAಧಿ ಸಮಯ ನೀಡಿದರೆ ಸಿದ್ದರಾಮಯ್ಯ ಅವರು ಈ ತಿಂಗಳ ೧೩ರಂದು ದೆಹಲಿಗೆ ತೆರಳುತ್ತಾರೆ ಎನ್ನಲಾಗಿದೆ. ಒಟ್ಟಾರೆ ನಾಯಕತ್ವ ಬದಲಾವಣೆಗಾಗಿ ಕಾಂಗ್ರೆಸ್ನಲ್ಲಿರುವ ನಡೆಯುತ್ತಿರುವ ಬೆಳವಣಿಗೆಗಳು ದಿನದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ಈ ಎಲ್ಲದರ ಮಧ್ಯೆ ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿ ಎಂದು ದಾಖಲೆ ಮಾಡಿದ ಬೆನ್ನಲ್ಲೆ ಇದೀಗ ತಮ್ಮ ೧೭ನೇ ಬಜೆಟ್ ಮಂಡನೆಗಾಗಿ ಸಿದ್ದತೆ ನಡೆಸಿದ್ದಾರೆ.
ಬಜೆಟ್ ಮಂಡನೆಗಾಗಿ ಸಿದ್ದತೆ ನಡೆಸಲು ಸಿದ್ದರಾಮಯ್ಯ ಅವರು ಮುಂದಾಗಿರುವ ಹಿನ್ನೆಲೆಯಲ್ಲಿ ಮಾರ್ಚ್ ೩೧ರವರೆಗೆ ನಾಯಕತ್ವ ಬದಲಾವಣೆ ಅಸಾಧ್ಯ ಎಂದು ರಾಜಕೀಯ ಲೆಕ್ಕಾಚಾರವಾಗಿದೆ.
ಇದಕ್ಕೂ ಮುನ್ನಾ ನಾಯಕತ್ವ ಬದಲಾವಣೆ ಮಾಡುವುದಾದರೆ ಅತೀ ಶೀಘ್ರದಲ್ಲಿ ಪಕ್ಷದ ವರಿಷ್ಠರು ಕ್ರಮಕ್ಕೆ ಮುಂದಾಗಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆದಿವೆ.
ವರಿಷ್ಠರ ಕರೆ ನಿರೀಕ್ಷೆಯಲ್ಲಿ..! ನಾಯಕತ್ವ ಬದಲಾವಣೆ ದೆಹಲಿಗೆ ತೆರಳಲು ಸಿಎಂ-ಡಿಸಿಎಂ ಸಜ್ಜು



