ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನಾ ಹುದ್ದೆಗಳಿಗೆ, ಸ್ಥಾನಗಳಿಗೆ ಮತ್ತು ನಿಗಮ, ಮಂಡಳಿಗಳಿಗೆ ಆಯ್ಕೆಯಾದ, ನೇಮಕಗೊಂಡ ಒಕ್ಕಲಿಗ ಸಮುದಾಯದ ನಾಯಕರು ಮತ್ತು ಪ್ರತಿನಿಧಿಗಳಿಂದ ಸನ್ಮಾನ ಸ್ವೀಕರಿಸಿದರು. ಬಳಿಕ ಎಲ್ಲರೂ ಒಟ್ಟಾಗಿ ಪಕ್ಷವನ್ನು ಗಟ್ಟಿಯಾಗಿ ಬೆಳೆಸಿ, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮುದಾಯದ ಪ್ರತಿಯೊಬ್ಬರಿಗೂ ತಲುಪಿಸಿ, ಮನವರಿಕೆ ಮಾಡಿಸುವಂತೆ ಹಾರೈಸಿದರು.
ವಿಧಾನಸಭೆಗೆ, ವಿಧಾನ ಪರಿಷತ್ತಿಗೆ, ಲೋಕಸಭೆಗೆ, ರಾಜ್ಯಸಭೆಗೆ, ರಾಜ್ಯ ನೀತಿ ಆಯೋಗಕ್ಕೆ, ಯೋಜನಾ ಆಯೋಗಕ್ಕೆ,
ಅನಿವಾಸಿ ಭಾರತೀಯ ಸಂಘಕ್ಕೆ ರಾಜ್ಯದ ಪ್ರತಿನಿಧಿಯಾಗಿ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸೇರಿ ಪ್ರಮುಖ ನಿಗಮ ಮಂಡಳಿಗಳಿಗೆ ಒಕ್ಕಲಿಗ ಸಮುದಾಯದ ಪ್ರತಿನಿಧಿಗಳನ್ನು ಆಧ್ಯತೆ ಮೇಲೆ ನೇಮಕ ಮಾಡಿಕೊಂಡಿದ್ದಕ್ಕಾಗಿ ನೇಮಕಗೊಂಡವರೆಲ್ಲರೂ ಒಟ್ಟಾಗಿ ನಗರದ ಏಟ್ರಿಯಾ ಹೋಟೆಲ್ ನಲ್ಲಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿದರು.
ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಗ್ಯಾರಂಟಿ ಗಳನ್ನು ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳುವ ಮೂಲಕ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯಗೊಳಿಸಲು ಶ್ರಮಿಸುವಂತೆ ಕರೆ ನೀಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಕೃಷ್ಣಬೈರೇಗೌಡ, ಚಲುವರಾಯಸ್ವಾಮಿ, ಕೆ.ವೆಂಕಟೇಶ್, ನೀತಿ ಆಯೋ
ಗದ ಉಪಾಧ್ಯಕ್ಷರಾದ ರಾಜೀವ್ ಗೌಡ, ರಾಜ್ಯಸಭೆಗೆ ಎರಡನೇ ಬಾರಿ ಆಯ್ಕೆಗೆ ಸಜ್ಜಾಗಿರುವ ಜಿ.ಸಿ.ಚಂದ್ರಶೇಖರ್, ಲೋಕಸಭಾ ಸದಸ್ಯ ಡಿ.ಕೆ.ಸುರೇಶ್, ಶಿಕ್ಷಕರ ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿ ವಿಧಾನಪರಿಷತ್ ಗೆ ಐದನೇ ಬಾರಿ ಪ್ರವೇಶ ಪಡೆದ ಪುಟ್ಟಣ್ಣ ಸೇರಿ ಒಕ್ಕಲಿಗ ಸಮುದಾಯದ ಹಾಲಿ, ಮಾಜಿ ಶಾಸಕರು, ಸಚಿವರುಗಳು, ನಾಯಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಅವರಿಂದಲೂ ಅಭಿನಂದಿಸಿಕೊಂಡರು.