ಬೆಂಗಳೂರು: ಪದೇ ಪದೇ ಬಿಜೆಪಿಯವರು ನಮ್ಮ ಮೇಲೆ ಟೀಕೆ ಮಾಡುತ್ತಾ ರಾಜ್ಯವನ್ನು ಸಾಲದ ಕೂಪದಲ್ಲಿ ಮುಳುಗಿಸಿದೆ ಎಂದು ಟೀಕೆ ಮಾಡುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಮೇಲೆ ಟೀಕೆ ಮಾಡುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಓದಿಕೊಂಡಿದ್ದಾರೆಯೇ ಎಂದು ಗುಡುಗಿದ್ದಾರೆ. ರಾಜ್ಯಕ್ಕೆ ಸಾಲ ಎಷ್ಟು ನೀಡಬೇಕು ಎಂಬುದನ್ನು ನಿಗದಿ ಮಾಡುವುದು ಕೇಂದ್ರ ಸರ್ಕಾರ. ಇದೀಗ ಕೇಂದ್ರ ಸರ್ಕಾರದ ಆಡಳಿತದಲ್ಲಿ ಯಾರಿದ್ದಾರೆ ಎಂದುಅವರು ಪ್ರಶ್ನಿಸಿದ್ದಾರೆ.
ರಾಜ್ಯದ ಜಿಡಿಪಿ ಬಗ್ಗೆ ವಿಜಯೇಂದ್ರ ತಿಳಿದುಕೊಂಡಿದ್ದಾರೆಯೇ ಎಂದು ಕೇಳಿದ ಅವರು, ಮೊದಲು ಎಲ್ಲವನ್ನು ತಿಳಿದು ಮಾತನಾಡಲಿ ಎಂದು ಹರಿಹಾಯ್ದಿದ್ದಾರೆ.
ಬಿಜೆಪಿ ವಿರುದ್ಧ ಸಿಎಂ ಗರಂ



