ಮೈಸೂರು: ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ಧತಿ ಸಂಬಂಧ ಇದುವರೆಗೂ ತಾವು ಪ್ರಧಾನಿ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಇದುವರೆಗೂ ಅವರಿಂದ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಓರ್ವ ಮುಖ್ಯಮಂತ್ರಿ ಪತ್ರ ಬರೆದಾಗ ಅದಕ್ಕೆ ಉತ್ತರ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಆದರೆ ತಾವು ಎರಡು ಬಾರಿ ಪತ್ರ ಬರೆದರೂ ಉತ್ತರ ಬಂದಿಲ್ಲ ಎಂದಿರುವ ಮುಖ್ಯಮಂತ್ರಿಯವರು ಏನಾಗುತ್ತದೋ ಮುಂದೆ ನೋಡೋಣ ಎಂದಿದ್ದಾರೆ.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ವಿಷಯಾಂತರ ಮಾಡಲು ಮುಂದಾಗಿ ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ಅವರು ಕಾನೂನಿಗೆ ಗೌರವ ಕೊಡಲಿ ಎಂದು ಸುದ್ದಿಗಾರರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದ್ದಾರೆ.
ತಮ್ಮ ಮಗ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್ ಸ್ಥಾನ ಕಲ್ಪಿಸುವ ಸಂಬಂಧ ಉತ್ತರಿಸಿದ ಮುಖ್ಯಮಂತ್ರಿಯವರು ಯತೀಂದ್ರಗೆ ವಿಧಾನಸಭಾ ಚುನಾವಣಾ…ಸಂದರ್ಭದಲ್ಲಿ ಎಂಎಲ್ಸಿ ಮಾಡುವ ಬಗ್ಗೆ ಹೈಕಮಾಂಡ್ ಹೇಳಿತ್ತು. ನಾನು ಕೋಲಾರದಿಂದ ಸ್ಪರ್ಧಿಸಬೇಕೆಂದಿದ್ದೆ, ಆದರೆ ಹೈಕಮಾಂಡ್ನವರು ನಿಮ್ಮ ಅಪ್ಪನಿಗೆ ವರುಣಾ ಕ್ಷೇತ್ರ ಬಿಟ್ಟುಕೊಡು ಎಂಎಲ್ಎಸಿ ಮಾಡುತ್ತೇವೆ ಎಂದು ತಿಳಿಸಿದ್ದರು.
ಈಗ ಹೈಕಮಾಂಡ್ನವರು ಏನು ಮಾಡತ್ತಾರೋ ನೋಡೊಣ ಎಂದಷ್ಟೇ ಹೇಳುವ ಮೂಲಕ ಸುದ್ದಿಗಾರರ ಪ್ರಶ್ನೆಗೆ ತಮ್ಮ ಮಗ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದರು.