ಮೈಸೂರು: ನಮಗೆ ನಮ್ಮ ಪೊಲೀಸರ ಮೇಲೆ ನಂಬಿಕೆಯಿದೆ. ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡೀಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಮ್ಮ ಪೊಲೀಸರು ನಡೆಸುವ ತನಿಖೆ ಬಗ್ಗೆ ನಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣವನ್ನುಸಿಬಿಐಗೆ ವಹಿಸುವಂತೆ ಬಿಜೆಪಿಯವರು ಪಟ್ಟು ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಯವರು, ಈ ಹಿಂದೆ ಸಿಬಿಐಯನ್ನು ಬಿಜೆಪಿಯವರು ಕರ್ಪಷನ್ ಬ್ಯೂರೋ ಆಫ್ ಇನ್ವೆಷ್ಟಿಗೇಷನ್ ಎಂದು ದೂರುತ್ತಿದ್ದರು. ದೇವೇಗೌಡರು ಚೋರ್ ಬಚಾವ್ ಸಂಸ್ಥೆ ಎಂದು ಟೀಕಿಸುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಸಿಬಿಐ ಮೇಲೆ ಪ್ರೀತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಪೊಲೀಸರು ಮಾಡುವ ತನಿಖೆಯ ಮೇಲೆ ನಾವು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ನಮಗಂತು ನಮ್ಮ ಪೊಲೀಸ್ ಸಂಪೂರ್ಣ ನಂಬಿಕೆಯಿದೆ. ನಾನಾಗಲೀ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಲಿ ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.
ನಮ್ಮ ಪೊಲೀಸರ ಮೇಲೆ ನಾವು ನಂಬಿಕೆಯಿಟ್ಟಿದ್ದೇವೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಕಾನೂನು ಪ್ರಕಾರ ಮಾಡಲು ತಿಳಿಸಿದ್ದೇನೆ. ಕಾನೂನು ಬಿಟ್ಟು ಮಾಡಿ ಎಂದು ಹೇಳಲ್ಲ. ಆಸ್ಟ್ರೇಲಿಯಾ, ಮಲೇಷೀಯಾದಲ್ಲಿ ಪೆನ್ಡ್ರೈವ್ ಮಾಡಲಾಗಿದೆ ಎಂದು ಕೇಳಿ ಬಂದಿರುವ ದೂರಿಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿ ಸಿಬಿಐಗೆ ನೀಡಿ ಎಂದು ಹೇಳಲು ಈತರಹದ ಆರೋಪ ಮಾಡುತಿದ್ದಾರೆ ಎಂದು ಹೇಳಿದರು.
ಈ ಹಿಂದೆ ಡಿ.ಕೆ.ರವಿ ಮತ್ತು ಜಾರ್ಜ್ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಅದು ಏನಾಯಿತು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಯವರು ನಾನು ಸಿಬಿಐ ಮೇಲೆ ನಂಬಿಕೆಯಿಲ್ಲ ಎಂದು ಹೇಳುವುದಿಲ್ಲ. ಆದರೆ ನಮ್ಮ ಪೊಲೀಸರ ಮೇಲೆ ವಿಶ್ವಾಸ ನಂಬಿಕೆಯಿದೆ ಎಂದು ತಿಳಿಸಿದರು.