ಗುಂಡ್ಲುಪೇಟೆ: ರಾಜ್ಯದ ಇತಿಹಾಸದಲ್ಲೇ ಹಿಂದೆ ಕೇಳರಿಯದ ಹಗರಣಗಳು ನಡೆಯುತ್ತಿದ್ದರು ಮುಖ್ಯಮಂತ್ರಿಗಳು ಬಂಡತನದಿಂದ ಎಲ್ಲವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ದಲಿತ ಮತ್ತು ಹಿಂದುಳಿದವರ ಹಣ ಭ್ರಷ್ಟಾಚಾರಕ್ಕೆ ಬಳಕೆಯಾಗುತ್ತಿದ್ದರಿಂದ ಖಜಾನೆ ಖಾಲಿ ಆದ ಪರಿಣಾಮ ಇಂದು ಸಾಮಾನ್ಯ ಜನರ ಮೇಲೆ ಒರೆ ಒರೆಸಿ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆಗೊತ್ತು ಗುರಿ ಇಲ್ಲದ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲಾಗದೆ ದಲಿತರ ಹಣದ ಹಗರಣಗಳನ್ನು ಮರೆಮಾಚಲು ಹಾಗೂ ರಾಜ್ಯದ ಜನರ ಗಮನ ಸೆಳೆಯಲು ಬೆಲೆ ಏರಿಕೆ ಮಾಡಿ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಈಗಿನ ಸರ್ಕಾರಕ್ಕೆ ಲೂಟಿ ಹೊಡೆಯಲು ಹಣದ ಮೂಲ ಎಲ್ಲಾ ಬಂದಾಗಿದ್ದ ಪರಿಣಾಮವಾಗಿ ಬೆಲೆ ಏರಿಕೆ ಬಿಸಿಯನ್ನು ಜನಸಾಮಾನ್ಯರ ಮೇಲೆ ಒರೆಸಿ ಸಾಮಾನ್ಯ ಜನರ ಜೀವನವನ್ನು ದುಷ್ಟರ ಮಾಡಿದ್ದಾರೆ ಎಂದು ಕಿಡಿಕಾರಿದರು. ಯಾವ ಸಮುದಾಯ ಇವರನ್ನು ನಂಬಿ ಮತ ನೀಡಿತು. ಆ ಸಮುದಾಯಗಳಿಗೆ ಪಂಗನಾಮ ಹಾಕಿದ್ದಾರೆ. ಇವರು ಜನರ ನಂಬಿಕೆಗೆ ಅರ್ಹರಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ತಿಳಿಸಿದ್ದಾರೆ.