ಹುಬ್ಬಳ್ಳಿ: ಇತ್ತೀಚೆಗೆ ಹುಬ್ಬಳ್ಳಿಯ ಕಾಲೇಜಿನಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ನೇಹಾ ತಂದೆ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಅವರಿಗೆ ಸಾಂತ್ವನ ಹೇಳಿ ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಇಂದು ಮೃತ ನೇಹಾ ಮನೆಗೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಅಲ್ಲದೆ ತರ್ವಿತ ನ್ಯಾಯಾಲಯ ಪ್ರಾರಂಭಿಸುವ ಕುರಿತು ಮಾಹಿತಿ ನೀಡಿದರು.ತದನಂತರ ಮುಖ್ಯಮಂತ್ರಿಯವರಿಗೆ ಮೊಬೈಲ್ ಮುಖಾಂತರ ಮಾತನಾಡಿದ ಸಚಿವರು, ತಮ್ಮ ಮಾತಿನ ನಂತರ ಮೊಬೈಲ್ ಅನ್ನು ನೇಹಾ ತಂದೆ ನಿರಂಜನ್ ಅವರಿಗೆ ಮಾತನಾಡಲು ಕೊಟ್ಟರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ನೇಹಾ ತಂದೆ ನಿರಂಜನ್ ಪರಸ್ಪರ ಮಾತನಾಡಿದ್ದಾರೆ.ಈ ಸಂದರ್ಭದಲ್ಲಿ ಮಾಜಿ ಸಚಿವ ಎ ಎಂ ಹಿಂಡಸಗೇರಿ ಸೇರಿದಂತೆ ಹಿರಿಯ ನಾಯಕರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.