ಕೋಲಾರ: ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ರೈತ ಸಂಘಗಳ ಮುಖಂಡಗಳೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು 2024 – 2025ರ ರಾಜ್ಯ ಬಜೆಟ್ ಪೂರ್ವಭಾವಿ ತಯಾರಿ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದರು.
ಸಭೆಯಲ್ಲಿ ಹಲವಾರು ವಿಚಾರಗಳು ರೈತರ ಬಗ್ಗೆ ಚರ್ಚೆ ಆಯಿತು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ನೀರಿನ ವಿಚಾರವಾಗಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ನಾರಾಯಣಸ್ವಾಮಿ ಅವರು ಕೆಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ನೀರನ್ನ ಮೂರು ಹಂತದಲ್ಲಿ ಶುದ್ಧೀಕರಣ ಮಾಡಲು ಬಜೆಟ್ನಲ್ಲಿ ಅನುದಾನ ಮೀಸಲಿಟ್ಟು ಘೋಷಣೆ ಮಾಡಬೇಕು.
ಕೆಸಿ ವ್ಯಾಲಿ ನೀರು ಕೆರೆಗಳು ತುಂಬಿ ಮಾಕೊರ್ಂಡಯ್ಯ ಡ್ಯಾಮ್ಗೆ ಸೇರುತ್ತದೆ ಅಲ್ಲಿಂದ ಹರಿದು ಕೋಲಾರ ಜಿಲ್ಲೆಯ ಮಾಲೂರು ಕೋಲಾರ ಬಂಗಾರಪೇಟೆ ಕೆಜಿಎಫ್ ತಾಲೂಕಿನ ಜನರ ಕುಡಿಯುವ ನೀರಿನ ಬವಣೆ ನೀಗಿಸಲು ಯರಗೋಳ್ ಡ್ಯಾಮ್ ನಿರ್ಮಾಣ ಮಾಡಿರುವುದು ಖುಷಿ ತಂದಿರುವ ವಿಚಾರ.
ಆದರೆ ಕುಡಿಯುವ ನೀರಿನ ಯೋಜನೆಗೆ ಮಾಡಿರುವ ಯರಗೋಳ್ ಡ್ಯಾಮ್ಗೆ ಕೆಸಿ ವ್ಯಾಲಿ ನೀರು ಸೇರುತ್ತದೆ ಅದನ್ನ ಕೂಡಲೇ ತಡೆಯಬೇಕು. ರೈತರು ಬೆಳೆಯುವಂತ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು ಎಂದು ಒತ್ತಾಯಿಸಲಾಯಿತು
ಯುವ ಘಟಕ ರಾಜ್ಯಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮಾತನಾಡಿ ರಾಜ್ಯದ ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ರೈತಪರ ಸರ್ಕಾರ ಎಂದು ನಿರೂಪಿಸಬೇಕು ಹಾಗೂ ಇತ್ತೀಚಿಗೆ ಭಾರತ ದೇಶದ ಜನಸಂಖ್ಯೆ ಹೆಚ್ಚಾಗುತ್ತಿದ್ದು ಅದರಲ್ಲೂ ಕರ್ನಾಟಕ ರಾಜ್ಯದ ಜನಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಆಹಾರ ಭದ್ರತೆ ಮೇಲೆ ಏರುಪೇರಾಗುವ ಲಕ್ಷಣ ಗೋಚರವಾಗುತಿದೆ.
ಆದ್ದರಿಂದ ಕೃಷಿ ಭೂಮಿಯನ್ನು ಕೃಷಿಗೆ ಮೀಸಲಿಟ್ಟು ಬಂಜರಭೂಮಿಯನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಲು ಮನವಿ ಮಾಡಿದರು.
ರಿಯಲ್ ಎಸ್ಟೇಟ್ ಮಾಫಿಯಾ ರೈತರಿಗೆ ಹಣದಾಸೆ ತೋರಿಸಿ ನೀವು ಈ ಭೂಮಿಯಲ್ಲಿ ಎಷ್ಟು ಬೆಳೆದರೂ ಬೆಳೆದಂತಹ ಬೆಳೆಗೆ ಬೆಲೆ ಇಲ್ಲ ಆದ್ದರಿಂದ ಈ ಭೂಮಿ ನಮಗೆ ಕೊಟ್ಟಲ್ಲಿ ನಾವು ಡೆವೆಲಪ್ ಮಾಡಿ ಮನೆ ಕಟ್ಟಿಕೊಳ್ಳಲು ಸೈಟುಗಳನ್ನಾಗಿ ಮಾರ್ಪಡಿಸಿ ಮಾರಾಟ ಮಾಡುವುದಾಗಿ ಹೇಳಿ ಫಲವತ್ತಾದ ಕೃಷಿ ಭೂಮಿಯನ್ನು ಬ್ರೋಕರಗಳ ಮೂಲಕ ಕಸಿದುಕೊಳ್ಳುತ್ತಿದ್ದಾರೆ ದಯವಿಟ್ಟು ಇದನ್ನು ತಡೆಯಲು ಮಾನ್ಯ ಮುಖ್ಯಮಂತ್ರಿಗಳು ಕ್ರಮ ವಹಿಸಬೇಕು.
ಬಜೆಟ್ನಲ್ಲಿ ಮುಖ್ಯಮಂತ್ರಿಗಳು ರೈತರ ಪರವಾಗಿ ವಿಶೇಷ ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಪರವಾಗಿ ವಿಶೇಷ ಕಾರ್ಯಕ್ರಮಗಳನ್ನು ಘೋಷಣೆ ಬಜೆಟ್ ನಲ್ಲಿ ಮಾಡಬೇಕು ಎಂದರು.ಮುಂದಿನ ಯುವ ಪೀಳಿಗೆಯನ್ನು ಕೃಷಿ ವಲಯಕ್ಕೆ ಆಕರ್ಷಣೆಮಾಡಿ ಉದ್ಯೋಗ ಸೃಷ್ಟಿ ಮಾಡಿ ಸಾವಲಂಬಿ ಬದುಕು ಕಟ್ಟಿಕೊಳ್ಳಲು ಬಜೆಟ್ ಅಲ್ಲಿ ವಿಶೇಷ ಕ್ರಮ ಕೈಗೊಳ್ಳಬೇಕು ಯುವ ರೈತರನ್ನ ಮದುವೆ ಮಾಡಿಕೊಳ್ಳುವ ವಧುಗಳಿಗೆ ಪ್ರೋತ್ಸಾಹ ರೂಪದಲ್ಲಿ 5 ಲಕ್ಷ ವಿಶೇಷ ಪ್ರೋತ್ಸಾಹಧನ ನೀಡಬೇಕು.
ಕೋಲಾರ ಎಪಿಎಂಸಿ ಮಾರುಕಟ್ಟೆಗೆ 100 ಎಕರೆ ಜಾಗವನ್ನು ಕೊಡಬೇಕು ವೇಮಗಲ್ ಪಟ್ಟಣ ಪಂಚಾಯಿತಿ ಹೊಸದಾಗಿ ರಚನೆಯಾಗಿದ್ದು ವಿಶೇಷ ಅನುದಾನವನ್ನು ನೀಡಿ ಕೂಡಲೇ ಚುನಾವಣೆಗಳನ್ನು ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಮನವಿ ಸಲ್ಲಿಸಲಾಯಿತು.
ಗೋಮಾಳ ಗುಂಡು ತೋಪು ಗೋಕುಂಟೆಗಳನ್ನ ಗೋವುಗಳಿಗೆ ಮೀಸಲಿಡಲು ವಿಶೇಷ ಕಾನೂನು ರಚನೆ ಮಾಡಬೇಕು.. ವಿಶೇಷವಾಗಿ ಕೋಲಾರ ಜಿಲ್ಲೆಯ ಶಾಸಕರುಗಳಿಗೆ ಕೋಲಾರ ಜಿಲ್ಲೆಯ ಉಸ್ತುವಾರಿಯನ್ನ ನೀಡಲು ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಯಿತು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರುಗಳು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಎಂ ಎಲ್ ಸಿ ನಜೀರ್ ಅಹ್ಮದ್ ರವರು ಹಲವಾರು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.